
ನವದೆಹಲಿ: ಬಜೆಟ್ ದಿನವೇ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗಿತ್ತು. ಇದೀಗ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಸರದಿ. ಭಾನುವಾರದಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್ ಗೆ ರು.5ರಷ್ಟು ದರ ಹೆಚ್ಚಳ ಮಾಡಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಆದೇಶ ಹೊರಡಿಸಿವೆ.
ಹೀಗಾಗಿ 14 ಕೆಜಿ ತೂಕದ ಸಿಲಿಂಡರ್ ನ ಪರಿಷ್ಕೃತ ದರ ದೆಹಲಿಯಲ್ಲಿ ರು.610 ಆಗಲಿದೆ. ಇದೇ ವೇಳೆ ವೈಮಾನಿಕ ಇಂಧನದರ (ಎಟಿಎಫ್) ದರ ಕೂಡಾ ಶೇ.8.2ರಷ್ಟು ಹೆಚ್ಚಾಗಿದೆ. ಇದೇ ವೇಳೆ ಎಲ್ ಪಿಜಿ ಸಬ್ಸಿಡಿಯನ್ನು ಗ್ರಾಹಕರ ಖಾತೆಗೆ ವರ್ಗಾಯಿಸುವ ಯೋಜನೆ ಜಾರಿ ಗೊಳಿಸಿದ್ದರಿಂದ ಅರ್ಹರಿಗೆ ಸಬ್ಸಿಡಿ ಸಿಗುವಂತಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
Advertisement