ಸೈಬರ್ ಸುರಕ್ಷತೆಗೆ ಕ್ರಮ ಕೈಗೊಳ್ಳಿ: ಪ್ರಧಾನಿ

ವಿಶ್ವದ ಪಾಲಿಗೆ ತಲೆನೋವಾಗಿ ಪರಿಣಮಿಸಿರುವ ಸೈಬರ್ ಸುರಕ್ಷತೆಗಾಗಿ ಆವಿಷ್ಕಾರಿ ಪರಿಹಾರಗಳನ್ನು ಕೈಗೊಳ್ಳುವಂತೆ ಭಾರತೀಯ ಐಟಿ ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ವಿಶ್ವದ ಪಾಲಿಗೆ ತಲೆನೋವಾಗಿ ಪರಿಣಮಿಸಿರುವ ಸೈಬರ್ ಸುರಕ್ಷತೆಗಾಗಿ ಆವಿಷ್ಕಾರಿ ಪರಿಹಾರಗಳನ್ನು ಕೈಗೊಳ್ಳುವಂತೆ ಭಾರತೀಯ ಐಟಿ ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಕಂಪ್ಯೂಟರ್ ಡಾಟಾಗಳನ್ನು ಸುರಕ್ಷತೆಯಿಂದಿಡಲು `ಕ್ಲೌಡ್ ಗೋಡೌನ್'ಗಳು ಹಾಗೂ `ಕ್ಲೌ ಡ್ ಲಾಕರ್'ಗಳಂಥ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ. ಇಡೀ ವಿಶ್ವ ಸೈಬರ್ ಭದ್ರತೆ ಕುರಿತು ತಲೆಕೆಡಿಸಿಕೊಂಡಿದೆ. ನಾನು ಪ್ರಧಾನಿಯಾದ ಬಳಿಕ ವಿಶ್ವದ ಸುಮಾರು 50 ರಾಜಕೀಯ ನಾಯಕರನ್ನು ಭೇಟಿಯಾಗಿದ್ದೇನೆ. ಅವರಲ್ಲಿ 25ರಿಂದ 30 ಮಂದಿ ಸೈಬರ್ ಭದ್ರತೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತೀಯ ಯುವಕರು ಸೈಬರ್ ಭದ್ರತೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲು ಸಾಧ್ಯವಿದೆಯೇ ಎಂದು ನಾಸ್ಕಾಂನ ಕಾರ್ಯಕ್ರಮವೊಂದರಲ್ಲಿ ಮೋದಿ ಪ್ರಶ್ನಿಸಿದ್ದಾರೆ. ಸೈಬರ್ ಭದ್ರತೆ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇದನ್ನು ಭಾರತೀಯ ಐಟಿ ವೃತ್ತಿನಿರತರು ಯಾವ ರೀತಿ ಸದುಪಯೋಗಪಡಿಸಿಕೊಳ್ಳಬಹುದು. ಸೈಬರ್ ಸುರಕ್ಷಾ ಸಾಧನ ಅಭಿವೃದ್ಧಿಪಡಿಸಬಹುದು ಎನ್ನುವುದಕ್ಕೆ ನಾಸ್ಕಾಂ ಪ್ರತ್ಯೇಕ ಸಮಿತಿ ರಚಿಸುವಂತೆಯೂ ಮನವಿ ಮಾಡಿದ್ದಾರೆ.

ಪಿಎಂಒ ಆ್ಯಪ್ ಗೆ ಸಲಹೆ ಕೊಡಿ ಉದ್ದಿಮೆ ಸಂಸ್ಥೆಗಳು ತಮ್ಮ ವಹಿವಾಟಿನ ವಿಸ್ತರಣೆಗಾಗಿ ಇತ್ತೀಚಿನ ದಿನಗಳಲ್ಲಿ ಆ್ಯಪ್ ಗಳನ್ನು ಬಳಸಿಕೊಳ್ಳುತ್ತಿವೆ. ಅದೇ ಮಾದರಿಯನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಮೋದಿಯವರೇ ಖುದ್ದಾಗಿ ಈ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಕೈಗಾರಿಕಾ ಸಂಸ್ಥೆಗಳು ಮತ್ತು ಉದ್ದಿಮೆ ವಲಯಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ತಮ್ಮದೇ ಆದ ಆ್ಯಪ್ ಗಳನ್ನು ಬಳಸುತ್ತವೆ. ಈ ಮೂಲಕ ವಹಿವಾಟು ವಿಸ್ತರಿಸುತ್ತವೆ. ಅದೇ ಮಾದರಿಯಲ್ಲಿ ಪ್ರಧಾನಿ ಕಚೇರಿಗೂ ಜನರ ಬಳಿಗೆ ತೆರಳುವ ಅಗತ್ಯವಿದೆ. ಅದಕ್ಕಾಗಿ myನಲ್ಲಿ ಶೀಘ್ರವೇ ಸಲಹೆ ನೀಡಬಹುದು' ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com