ಹುಲಿ ಸಿಂಹಗಳನ್ನು ಮನೆಯಲ್ಲೇ ಸಾಕಲು ಬಿಡಬೇಕಂತೆ!

ಅಳಿವಿನಂಚಿನಲ್ಲಿರುವ ಹುಲಿ, ಸಿಂಹಗಳ ರಕ್ಷಿಸಲು ಹೊಸ ವಿಧಾನವೊಂದಿದೆ. ಅದೇನೆಂದರೆ ಮನೆಯಲ್ಲೇ ಇನ್ನಿತರ ಸಾಕು ಪ್ರಾಣಿಗಳಂತೆ ಹುಲಿ, ಸಿಂಹಗಳನ್ನು ಸಾಕಬೇಕಂತೆ...
ಹುಲಿ ಸಿಂಹಗಳನ್ನು ಮನೆಯಲ್ಲೇ ಸಾಕಲು ಬಿಡಬೇಕಂತೆ!

ನವದೆಹಲಿ: ಅಳಿವಿನಂಚಿನಲ್ಲಿರುವ ಹುಲಿ, ಸಿಂಹಗಳ ರಕ್ಷಿಸಲು ಹೊಸ ವಿಧಾನವೊಂದಿದೆ. ಅದೇನೆಂದರೆ ಮನೆಯಲ್ಲೇ ಇನ್ನಿತರ ಸಾಕು ಪ್ರಾಣಿಗಳಂತೆ ಹುಲಿ, ಸಿಂಹಗಳನ್ನು ಸಾಕಬೇಕಂತೆ.

ಈ ಐಡಿಯಾ ಕೊಟ್ಟಿರುವುದು ಮಧ್ಯಪ್ರದೇಶದ ಹಿರಿಯ ಸಚಿವೆ ಕುಸುಮ್ ಮೆಹ್ದೆಲೆ. ಅರಣ್ಯ ಇಲಾಖೆಗೆ ಮಾಡಿರುವ ಮನವಿಯಲ್ಲಿ ಹುಲಿ, ಸಿಂಹಗಳನ್ನು ಮನೆಯಲ್ಲೇ ಸಾಕಲು ಅನುಮತಿ ನೀಡಿ ಎಂದಿದ್ದಾರೆ. ಥಾಯ್ಲೆಂಡ್ ನಲ್ಲೂ ಮೊದಲು ಹುಲಿಗಳು ಅಳಿವಿನಂಚಿನಲ್ಲಿದ್ದಾಗ ಕಾನೂನಿನ ತಿದ್ದುಪಡಿಯಿಂದ ಅವುಗಳನ್ನೂ ಮನೆ ಯಲ್ಲಿ ಸಾಕಲು ಅನುಮತಿ ಕೊಟ್ಟಾಗಿನಿಂದ ಈಗ ಹುಲಿಗಳ ಸಂಖ್ಯೆ ಹೆಚ್ಚಿದೆ ಎಂದಿದ್ದಾರೆ.

ಇವರ ಈ ಮನವಿಗೆ ನೀವೇ ಉತ್ತರಿಸಿ ಎಂದು ಮಧ್ಯಪ್ರದೇಶ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ನರೇಂದ್ರ ಕುಮಾರ್ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ಭಾರತೀಯ ವನ್ಯಜೀವಿ ಸಂಸ್ಥೆಗೆ ಪತ್ರ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com