
ನವದೆಹಲಿ: ಭೂಸ್ವಾಧೀನ ವಿಧೇಯಕ ದ ಗೊಂದಲದ ನಡುವೆಯೇ ಸರ್ಕಾರ ಸೋಮವಾರ ಲೋಕಸಭೆಯಲ್ಲಿ ಕಲ್ಲಿದ್ದಲು ವಿಧೇಯಕ ಮಂಡಿ ಸಿದೆ. ಕಲ್ಲಿದ್ದಲು ಗಣಿಕಾರಿಕೆ (ವಿಶೇಷ ನಿಬಂದನೆ )ವಿಧೇಯಕ 2015 ಅನ್ನು ಮಂಡಿಸಿದ ಕಲ್ಲಿದ್ದಲು ಸಚಿವ ಪೀಯೂಶ್ ಗೋಯಲ್, ಕೆಲವೊಂದು ಕಲ್ಲಿದ್ದ ಲು ನಿಕ್ಷೇಪಗಳನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಯನ್ನು ತರಬೇಕಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಬಿಜೆಡಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
Advertisement