
ಚಂಡೀಗಡ: ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಹಿಯುಳ್ಳ ಚೆಕ್ ಮತ್ತು ಇತರ ದಾಖಲೆ ಪತ್ರಗಳನ್ನು ಅಪ್‍ಲೋಡ್ ಮಾಡಿದಿರಾ ಜೋಕೆ! ಮೋದಿ ಸೂಟ್ ಅನ್ನು ಖರೀದಿಸಿದ್ದ ಸೂರತ್‍ನ ಧರ್ಮನಂದನ ಡೈಮಂಡ್ಸ್ ಮುಖ್ಯಸ್ಥ ಲಾಲ್ಜಿಭಾಯಿ ಸಹಿ ಇರುವ ಬ್ಯಾಂಕ್ನ ಚೆಕ್ನ ಸಂಖ್ಯೆಯನ್ನು ಬದಲು ಮಾಡಿ, ವಂಚನೆ ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಹರ್ಯಾಣದ ಹಿಸ್ಸಾರ್ ನ ವಂಚಕ ಈ ಕೃತ್ಯ ಎಸಗಿದ್ದಾನೆ.
ಏನಿದು ಪ್ರಕರಣ ?: ಸೂರತ್ನಲ್ಲಿ ನಡೆದಿದ್ದ ಹರಾಜಿನಲ್ಲಿ ಪ್ರಧಾನಿ ಮೋದಿ ಗಣರಾಜ್ಯೋತ್ಸವ ದಿನದಂದು ಧರಿಸಿದ್ದ ಸೂಟ್ ಹರಾಜಾಗಿತ್ತು. ಅದನ್ನು ಖರೀದಿಸಿದ್ದ ಲಾಲ್
ಜಿಭಾಯಿ ಎಚ್‍ಡಿಎಫ್ ಸಿ ಬ್ಯಾಂಕ್‍ನ ಚೆಕ್ನಲ್ಲಿ ಮೊತ್ತ ನಮೂದಿಸಿ ಸಹಿ ಮಾಡಿ ಅದನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿದ್ದರು. ಅದನ್ನು ಕೋಟ್ಯಂತರ ಮಂದಿ ವೀಕ್ಷಿಸಿದ್ದರು. ಹರ್ಯಾಣದ ಹಿಸ್ಸಾರ್ನ ವ್ಯಕ್ತಿಯೊಬ್ಬ ಅತಿ ಬುದ್ಧವಂತಿಕೆ ಪ್ರಯೋಗಿಸಲು ಮುಂದಾದ. ಲಾಲ್ಜಿ ಭಾಯಿ ನೀಡಿದ್ದ ಚೆಕ್ನ ಕೊನೆ 2 ಸಂಖ್ಯೆ ಬದಲು ಮಾಡಿ ಅದನ್ನು ಕ್ಲಿಯರೆನ್ಸ್ಗಾಗಿ ಹಾಕಿದ್ದ.
ಚೆಕ್ ಕ್ಲಿಯರೆನ್ಸ್ ಮಾಡುವ ಮುನ್ನ ಬ್ಯಾಂಕಿನ ಸಿಬ್ಬಂದಿ ಲಾಲ್‍ಜಿ ಭಾಯ್ ಗೆ ಫೋನ್ ಮಾಡಿ ವಿಚಾರಿಸಿದರು. ಈ ವೇಳೆಗೆ ಪ್ರಕರಣ ಬಯಲಾಯಿತು. ಧರ್ಮಾನಂದ ಡೈಮಂಡ್ಸ್‍ನ ಲೆಕ್ಕಪತ್ರ ವಿಭಾಗದ ಮುಖ್ಯಸ್ಥ ಈ ಬಗ್ಗೆ ಪೋಲೀಸರಿಗೆ ದೂರು ನೀಡಿದರು. ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಸ್ಸಾರ್ ಜಿಲ್ಲಾ ಎಸ್‍ಪಿ ಸೂರತ್‍ನಲ್ಲಿ ಪ್ರಕರಣ ದಾಖಲಾಗಿದೆ. ಅವರಿಗೆ ಹಿಸ್ಸಾರ್ ಜಿಲ್ಲಾ ಪೊಲೀಸ್ ತನಿಖೆಯಲ್ಲಿ ನೆರವು ನೀಡಲಿದೆ ಎಂದು ಹೇಳಿದ್ದಾರೆ.
ವಂಚಕನ ವಿವರದ ಬಗ್ಗೆ ಪೊ ಲೀಸರು ಮಾಹಿತಿ ನೀಡಿಲ್ಲ.
Advertisement