ಅಫ್ಜಲ್ ಗುರು ಅವಶೇಷ ಕೇಳುವ ಹಕ್ಕು ಪಿಡಿಪಿಗಿಲ್ಲ: ಜಾವೆದ್ ಅಖ್ತರ್

ಕಣಿವೆ ರಾಜ್ಯದ ಬಿಜೆಪಿಯ ಮೈತ್ರಿ ಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಶಾಸಕರಿಗೆ ಸಂಸತ್ ದಾಳಿ ಪ್ರಕರಣದ ರೂವಾರಿ ಉಗ್ರ ಅಫ್ಜಲ್ ಗುರುವಿನ ಅವಶೇಷ ಕೇಳುವ ಹಕ್ಕಿಲ್ಲ...
ಖ್ಯಾತ ಸಾಹಿತಿ ಮತ್ತು ರಾಜ್ಯ ಸಭಾ ಶಾಸಕ ಜಾವೇದ್ ಅಖ್ತರ್
ಖ್ಯಾತ ಸಾಹಿತಿ ಮತ್ತು ರಾಜ್ಯ ಸಭಾ ಶಾಸಕ ಜಾವೇದ್ ಅಖ್ತರ್

ನವದೆಹಲಿ: ಕಣಿವೆ ರಾಜ್ಯದ ಬಿಜೆಪಿಯ ಮೈತ್ರಿ ಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ ಶಾಸಕರಿಗೆ ಸಂಸತ್ ದಾಳಿ ಪ್ರಕರಣದ ರೂವಾರಿ ಉಗ್ರ ಅಫ್ಜಲ್ ಗುರುವಿನ ಅವಶೇಷ ಕೇಳುವ ಹಕ್ಕಿಲ್ಲ ಎಂದು ಖ್ಯಾತ ಸಾಹಿತಿ ಮತ್ತು ರಾಜ್ಯ ಸಭಾ ಶಾಸಕ ಜಾವೆದ್ ಅಖ್ತರ್ ಮಂಗಳವಾರ ಹೇಳಿದ್ದಾರೆ.

ಕಳೆದ ಭಾನುವಾರವಷ್ಟೇ ಕಣಿವೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯೀದ್ ಅವರ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ, ಸಂಸತ್ ಮೇಲಿನ ದಾಳಿ ಪ್ರಕರಣದ ಮೇರೆಗೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಉಗ್ರ ಅಫ್ಜಲ್ ಗುರು ಅವಶೇಷಗಳನ್ನು ತಮಗೆ ನೀಡಬೇಕೆಂದು ಪಿಡಿಪಿಯ ಕೆಲವು ಶಾಸಕರು ನಿನ್ನೆ ಪಟ್ಚು ಹಿಡಿದಿದ್ದರು.

ಪಿಡಿಪಿಯ ಈ ಹೇಳಿಕೆಗೆ ಇಂದು ಪ್ರತಿಕ್ರಿಯೆ ನೀಡಿರುವ ಜಾವೆದ್ ಅಖ್ತರ್ ಅವರು, ಉಗ್ರ ಅಫ್ಜಲ್ ಗುರುವಿನ ಪಾರ್ಥೀವ ಶರೀರದ ಅವಶೇಷ ಕೇಳುವ ಹಕ್ಕು ಆತನ ಕುಟುಂಬಸ್ಥರಿಗೆ ಮಾತ್ರ ಇದ್ದು, ಪಿಡಿಪಿ ಶಾಸಕರಿಗೆ ಅಫ್ಜಲ್ ಗುರು ಶರೀರದ ಅವಶೇಷ ಕೇಳುವ ಹಕ್ಕು ಇಲ್ಲ. ಒಂದು ವೇಳೆ ಅಫ್ಜಲ್ ಗುರುವಿನ ಕುಟುಂಬಸ್ಥರು ಕೇಳಿದರೆ ಅವರಿಗೆ ಅವಶೇಷಗಳನ್ನು ನೀಡಬಹುದು. ಈ ಕುರಿತಂತೆ ಗೊಂದಲಗಳನ್ನು ಸೃಷ್ಟಿ ಮಾಡಬೇಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

'ಕಣಿವೆ ರಾಜ್ಯದಲ್ಲಿ ಶಾಂತಿಯುತ ಚುನಾವಣೆ ನಡೆಯಲು ಪಾಕಿಸ್ತಾನ ಸರ್ಕಾರ ಮತ್ತು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಕಾರಣ. ಶಾಂತಿಯುತ ಮತದಾನಕ್ಕಾಗಿ ಭಯೋತ್ಪಾಕದ ಸಂಘಟನೆಗಳು ಶ್ರಮಿಸಿದ್ದವು' ಎಂದು ಮುಫ್ತಿ ಮೊಹಮದ್ ಹೇಳಿದ್ದರು. ಈ ಹೇಳಿಕೆಗೆ ದೇಶಾದ್ಯಂತ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಿಡಿಪಿಯ ಕೆಲ ಶಾಸಕರು ಮತ್ತೆ ವಿವಾದಾತ್ಮಕ ವಿಚಾರಗಳನ್ನು ಮಾಧ್ಯಮಗಳಲ್ಲಿ ಚರ್ಚಿಸುವ ಮೂಲಕ ಬಿಜೆಪಿಗೆ ತೀವ್ರ ಮುಜುಗರವನ್ನುಂಟು ಮಾಡುತ್ತಿದ್ದಾರೆ.

2001ರಲ್ಲಿ ನಡೆದಿದ್ದ ಸಂಸತ್ ಮೇಲಿನ ಉಗ್ರರ ದಾಳಿ ಪ್ರಕರಣದಲ್ಲಿ ಒಟ್ಟು 9 ಯೋಧರು ಧಾರುಣವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣದ ರೂವಾರಿಯಾಗಿರುವ ಉಗ್ರ ಅಫ್ಜಲ್ ಗುರುವನ್ನು ಕೇಂದ್ರ ಸರ್ಕಾರ ಗಲ್ಲಿಗೇರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com