
ನವದೆಹಲಿ: ದೇಶಾದ್ಯಂತ ಹಂದಿಜ್ವರಕ್ಕೆ ಮತ್ತೆ 40 ಮಂದಿ ಜ್ವರಕ್ಕೆ ಬಲಿಯಾಗಿದ್ದು, ಮೃತರ ಸಂಖ್ಯೆ 1,115ಕ್ಕೇರಿದೆ. ಜತೆಗೆ, ಹಂದಿಜ್ವರದ ಸೋಂಕು ತಗುಲಿದವರ ಸಂಖ್ಯೆ 20 ಸಾವಿರದ ಗಡಿ ದಾಟಿದೆ. ಕಳೆದೆರಡು ದಿನಗಳಿಂದ ಬೀಳುತ್ತಿರುವ ಮಳೆ ಹಂದಿಜ್ವರದ ಬಿಸಿಯನ್ನು ಮತ್ತಷ್ಟು ಏರಿಸಿದ್ದು, ಜನರನ್ನು ಆತಂಕಕ್ಕೀಡುಮಾಡಿದೆ. ಮಳೆಯಾಗುತ್ತಿರುವ ಕಾರಣ ಹಂದಿಜ್ವರಕ್ಕೆ ಈಡಾಗುತ್ತಿರುವವರ ಸಂಖ್ಯೆಯೂ ಹೆಚ್ಚಳವಾಗುವ ಸಾಧ್ಯತೆಯಿದೆ.
Advertisement