ಪಾಕ್ ಪರಾಕ್‍ಗೆ ಪ್ರತಿಪಕ್ಷ ತಪರಾಕಿ

`ಶಾಂತಿಯುತ ಮತದಾನಕ್ಕೆ ಉಗ್ರರು, ಪಾಕಿಸ್ತಾನ ಕಾರಣ' ಎಂಬ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್...
ಮುಫ್ತಿ  ಮೊಹಮ್ಮದ್ ಸಯೀದ್
ಮುಫ್ತಿ ಮೊಹಮ್ಮದ್ ಸಯೀದ್
Updated on

ನವದೆಹಲಿ: `ಶಾಂತಿಯುತ ಮತದಾನಕ್ಕೆ ಉಗ್ರರು, ಪಾಕಿಸ್ತಾನ ಕಾರಣ' ಎಂಬ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ  ಮೊಹಮ್ಮದ್ ಸಯೀದ್ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಮುಫ್ತಿ  ವಿವಾದಾತ್ಮಕ ಹೇಳಿಕೆ ಸೋಮವಾರ ಸಂಸತ್ ನ ಎರಡೂ ಸದನಗಳಲ್ಲಿ ಪ್ರತಿಧ್ವನಿಸಿ, ತೀವ್ರ ಗದ್ದಲ ಸೃಷ್ಟಿಸಿದೆ. ಇದೇ ವೇಳೆ, ಬಿಜೆಪಿ
ಮಾತ್ರ ಮುಫ್ತಿ  ಹೇಳಿಕೆ ವಿವಾದದಿಂದ ದೂರವುಳಿದಿದೆ.ಮುಫ್ತಿ  ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ  ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದ್ದು, ಒಂದು ಹಂತದಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರೆಲ್ಲರೂ ಸಭಾತ್ಯಾಗ ಮಾಡಿದ ಘಟನೆಯೂ ನಡೆದಿದೆ. ಒಟ್ಟಾರೆ ತಿಂಗಳುಗಟ್ಟಲೆ ಸಮಾಲೋಚನೆ ನಡೆಸಿ ಕೊನೆಗೆ ಪಿಡಿಪಿ ಜತೆ ಮೈತ್ರಿ ಮಾಡಿಕೊಂಡ ಬಿಜೆಪಿಗೆ ಈಗ ಪಿಡಿಪಿಯ ಅಟಾಟೋಪಗಳು ನುಂಗಲಾರದ ತುತ್ತಾಗಿ ಪರಿಣಮಿಸಿವೆ.

ನಿರ್ಣಯಕ್ಕೆ ಒತ್ತಾಯ: ಲೋಕಸಭೆಯ ಶೂನ್ಯ ವೇಳೆಯಲ್ಲಿ `ಉಗ್ರರಿಗೆ ಕೃತಜ್ಞತೆ' ಹೇಳಿಕೆಯನ್ನು ಪ್ರಸ್ತಾಪಿಸಿದ ಪ್ರತಿಪಕ್ಷಗಳು, ಸಯೀದ್ ಹೇಳಿಕೆ ವಿರುದಟಛಿ ನಿರ್ಣಯ
ಕೈಗೊಳ್ಳಬೇಕು ಎಂದು ಆಗ್ರಹಿಸಿದವು. ಸ್ವತಃ ಮುಫ್ತಿ  ಅವರೇ ಈ ಬಗ್ಗೆ (ಉಗ್ರರಿಗೆ ಧನ್ಯವಾದ) ಮೋದಿ ಬಳಿಯೂ ಮಾತನಾಡಿದ್ದೆ ಎಂದು ಹೇಳಿದ್ದಾರೆ. ಹಾಗಾಗಿ ಪ್ರಧಾನಿ ಪ್ರತಿಕ್ರಿಯೆ ನೀಡಲೇಬೇಕು ಎಂದು ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಸರ್ಕಾರ ಮತ್ತು ನಮ್ಮ ಪಕ್ಷಕ್ಕೂ ಮುಫ್ತಿ ಹೇಳಿಕೆಗೂ ಸಂಬಂಧವಿಲ್ಲ ಎಂದರು. ಇದರಿಂದ ತೃಪ್ತರಾಗದ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು. ಏತನ್ಮಧ್ಯೆ, ರಾಜ್ಯಸಭೆಯಲ್ಲೂ ಇದೇ ವಿಚಾರ ಗದ್ದಲಕ್ಕೆ ಕಾರಣವಾಯಿತು. ಕೊನೆಗೆ, ಕಣಿವೆ ರಾಜ್ಯದ ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋ ಗ ಮತ್ತು ಭದ್ರತಾ ಪಡೆಗಳೇ ಕಾರಣ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ವಿವಾದಕ್ಕೆ ತೆರೆಎಳೆಯಲು ಪ್ರಯತ್ನಿಸಿತು.

ಪಿಡಿಪಿ ಹೊಸ ಬಾಂಬ್: ಉಗ್ರರಿಗೆ ಧನ್ಯವಾದ ಹೇಳಿ ಮೊದಲ ದಿನವೇ ಮುಖ್ಯಮಂತ್ರಿ ಸಯೀದ್ ವಿವಾದ ಸೃಷ್ಟಿಸಿದ್ದಾಯ್ತು. ಈಗ ಎರಡನೇ ದಿನಪಿಡಿಪಿ ಶಾಸಕರು ಮಿತ್ರಪಕ್ಷ ಬಿಜೆಪಿ ಮೇಲೆ ಮತ್ತೊಂದು ಬಾಂಬ್ ಹಾಕಿದ್ದಾರೆ. ಸಂಸತ್ ದಾಳಿಕೋರ ಅಫ್ಜಲ್  ಗುರುವನ್ನು ಗಲ್ಲಿಗೇರಿಸಿದ್ದು ನ್ಯಾಯಾಂಗಕ್ಕೆ ಮಾಡಿದಅಣಕು. ಹಾಗಾಗಿ ಅಫ್ಜ ಲ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಬೇಕು ಎಂಬ ಒತ್ತಾಯವನ್ನು ನಾವು ಬೆಂಬಲಿಸುತ್ತೇವೆ ಎಂದು 8 ಪಿಡಿಪಿ ಶಾಸಕರು ಪ್ರಕಟಣೆ ಹೊರಡಿಸಿದ್ದಾರೆ. ಇದು ಬಿಜೆಪಿಗೆ ಮತ್ತೊಂದು ತಲೆನೋವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com