ಹಳಿಗೆ ಬರುತ್ತಾ ಮಾತುಕತೆ?

ಏಳು ತಿಂಗಳ ಹಿಂದೆ ಮುರಿದು ಬಿದ್ದಿದ್ದ ಭಾರತ-ಪಾಕಿಸ್ತಾನ ನಡುವಿನ ಮಾತುಕತೆ ಮತ್ತೆ ಆರಂಭವಾಗಲಿದೆಯೇ? ಅಂಥ ಸುಳಿವು ಮಂಗಳವಾರ ಹೊರಬಿದ್ದಿದೆ...
ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್
ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್

ಇಸ್ಲಾಮಾಬಾದ್/ನವದೆಹಲಿ: ಏಳು ತಿಂಗಳ ಹಿಂದೆ ಮುರಿದು ಬಿದ್ದಿದ್ದ ಭಾರತ-ಪಾಕಿಸ್ತಾನ ನಡುವಿನ ಮಾತುಕತೆ ಮತ್ತೆ ಆರಂಭವಾಗಲಿದೆಯೇ? ಅಂಥ ಸುಳಿವು ಮಂಗಳವಾರ ಹೊರಬಿದ್ದಿದೆ.

ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಮತ್ತು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಏಜಾಜ್ ಚೌಧರಿ ನಡುವಿನ ಮಾತುಕತೆ ವೇಳೆ ಈ ಅಂಶ ಪ್ರಧಾನವಾಗಿ ಪ್ರಸ್ತಾಪವಾಗಿದೆ. ಮುಂದಿನ ವರ್ಷ ಇಸ್ಲಾಮಾಬಾದ್‍ನಲ್ಲಿ ನಡೆಯಲಿರುವ ಸಾರ್ಕ್ ರಾಷ್ಟ್ರಗಳ ಸಮ್ಮೇಳನ ನಡೆಯಲಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ಬಗ್ಗೆಯೂ ವಿಶೇಷವಾಗಿ ಚರ್ಚಿಸಲಾಗಿದೆ. ಏಕೆಂದರೆ ಸಾರ್ಕ್ ದೇಶಗಳಲ್ಲಿ ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳೇ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಮೋದಿಯವರ ಸಂಭಾವ್ಯ ಪಾಕ್ ಭೇಟಿ ಮಹತ್ವ ಪಡೆದಿದೆ.

ಕಳೆದ ಆಗಸ್ಟ್ ನಲ್ಲಿ ನಡೆಯಬೇಕಾಗಿದ್ದ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಪಾಕ್ ಮೊಂಡಾಟದಿಂದ ಮುರಿದು ಬಿದ್ದಿತ್ತು. ಹಲವು ವಿಚಾರ ಪ್ರಸ್ತಾಪ: ಚೌಧರಿ ಜತೆಗಿನ ಮಾತುಕತೆ ರಚನಾತ್ಮಕ ಹಾಗೂ ಧನಾತ್ಮಕ ವಾತಾವರಣದಲ್ಲಿ ನಡೆಯಿತು. ದ್ವಿಪಕ್ಷೀಯ ಮಾತುಕತೆ, ಮುಂದಿನ ವರ್ಷ ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನ, ಗಡಿವಿವಾದ ಹಾಗೂ ವ್ಯಾಪಾರದ ಸೇರಿದಂತೆ ಹಲವು ವಿಚಾರಗಳು ಈ ಮಾತುಕತೆ ವೇಳೆ ಪ್ರಸ್ತಾಪವಾದವು ಎಂದಿದ್ದಾರೆ ಜೈಶಂಕರ್. ಪಾಕ್ ಪಿಎಂ ಜತೆ ಭೇಟಿ: ಪಾಕ್ ವಿದೇಶಾಂಗ ಕಾರ್ಯದರ್ಶಿ ಜತೆ ಭೇಟಿ ಬಳಿಕ ಜೈಶಂಕರ್ ಪ್ರಧಾನಿ ನವಾಜ್ ಷರೀಫ್, ಅಲ್ಲಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಸೇರಿದಂತೆ ಪ್ರಮುಖರ ಜತೆ ಚರ್ಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com