
ಮುಂಬೈ: ಕೇಂದ್ರ ಸರ್ಕಾರದ ಭೂಸ್ವಾಧೀನ ಕಾಯ್ದೆ ವಿರುದ್ಧ ಪಾದಯಾತ್ರೆ ನಡೆಸಲು ಮುಂದಾಗಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಗೆ ಬೆದರಿಕೆ ಹಾಕಲಾಗಿದೆ.
ಕೇಂದ್ರದ ನೀತಿ ವಿರುದ್ಧ ಹೋರಾಟ ಮಾಡಿದರೆ ಭಾರತಕ್ಕೆ ಬಂದು ಗುಂಡಿಕ್ಕಿ ಕೊಲ್ಲುವುದಾಗಿ ಕೆನಡಾ ಮೂಲದ ವ್ಯಕ್ತಿ ಗಗನ್ ವಿದು ಎಂಬಾತ ಬೆದರಿಕೆ ಹಾಕಿದ್ದ.
ಹಾಜರೆಯವರ ಫೇಸ್‌ಬುಕ್ ಪೇಜ್‌ಗೆ ಈ ಸಂದೇಶವನ್ನು ರವಾನಿಸಲಾಗಿತ್ತು. ಫೇಸ್‌ಬುಕ್ ಸಂದೇಶಗಳನ್ನು ಗಮನಿಸುತ್ತಿರುವ ಅವರ ಆಪ್ತರೊಬ್ಬರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆದರಿಕೆ ಸಂದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಜಾರೆ ಈ ಹಿಂದೆ ಕೂಡ ತಮಗೆ ಇಂಥ ಎಚ್ಚರಿಕೆ ಬಂದಿತ್ತು ಎಂದಿದ್ದಾರೆ.
Advertisement