'ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರಕ್ಕಾಗಿ 40 ಸಾವಿರ ಪಡೆದಿದ್ದ ಮುಕೇಶ್ ಸಿಂಗ್
ನವದೆಹಲಿ: ನಿರ್ಭಯಾ ಪ್ರಕರಣದ ಪ್ರಮುಖ ಅಪರಾಧಿ ಮುಕೇಶ್ ಸಿಂಗ್ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಳ್ಳಲು 40 ಸಾವಿರ ರುಪಾಯಿ ಪಡೆದಿದ್ದಾನೆ ಎನ್ನಲಾಗಿದೆ.
ಬ್ರಿಟನ್ ಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಅವರ 'ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರಕ್ಕಾಗಿ ಮುಕೇಶ್ ಸಿಂಗ್ ಮೊದಲು 2 ಲಕ್ಷಕ್ಕೆ ಬೇಡಿಕ್ಕೆ ಇಟ್ಟಿದ್ದರು. ಆದರೆ ಬಳಿಕ ಆತ 40 ಸಾವಿರಕ್ಕೆ ಒಪ್ಪಿಕೊಂಡಿದ್ದು, ಈ ಮೊತ್ತವನ್ನು ಮುಕೇಶ್ ಸಿಂಗ್ ಕುಟುಂಬಸ್ಥರಿಗೆ ವಿತರಿಸಲಾಗಿದೆ ಎಂದು ನವಭಾರತ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಈ ಸಾಕ್ಷ್ಯಚಿತ್ರ ತಯಾರಿಕೆಗಾಗಿ ಮೊದಲು ಲೆಸ್ಲಿ ಉಡ್ವಿನ್ ಹಲವು ಬಾರಿ ಪ್ರಯತ್ನಗಳನ್ನು ಮಾಡಿದ್ದರು. ಆದರೆ ಮೊದಲು ಅವರಿಗೆ ಅನುಮತಿ ಸಿಕ್ಕಿರಲಿಲ್ಲ ಕೊನೆಗೆ ಕುಲ್ಲಾರ್ ಎಂಬಾತನ ಮುಖೇನ ಅವರು ಗೃಹ ಸಚಿವಾಲಯ ಮತ್ತು ತಿಹಾರ್ ಜೈಲಿನಿಂದ ಅನುಮತಿ ಸಿಕ್ಕಿದೆ ಎಂದು ವರದಿಯಲ್ಲಿ ಹೇಳಿದೆ.
ಡಿ. 16ರ ರಾತ್ರಿ ನಿರ್ಭಯಾ ಆಕೆಯ ಸ್ನೇಹಿತನೊಂದಿಗೆ ಬಸ್ ಹತ್ತಿದ್ದು, ಈ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದು, ನಿರ್ಭಯಾಳನ್ನು ಬಸ್‌ನ ಹಿಂಬದಿಯ ಸೀಟಿಗೆ ಎಳೆದೊಯ್ದಿದ್ದು, ಸರಣಿ ಅತ್ಯಾಚಾರ ಎಸಗಿದ್ದು, ಅವರಿಬ್ಬರನ್ನೂ ಚಲಿಸುತ್ತಿರುವ ಬಸ್‌ನಿಂದ ಕೆಳಕ್ಕೆ ನೂಕಿದ್ದು...ಹೀಗೆ ಹಲವು ವಿಷಯಗಳನ್ನು ಮುಕೇಶ್ ಸಿಂಗ್ ಬಿಚ್ಚಿಟ್ಟಿದ್ದಾನೆ. ಈ ವಿಡಿಯೋಗೆ ಭಾರತದಲ್ಲಿ ನಿಷೇಧ ಹೇರಲಾಗಿತ್ತು.

