ಇಂಡಿಯಾಸ್ ಡಾಟರ್: ಆತ್ಮ ಸಾಕ್ಷಿಚಿತ್ರ

ಭಾರತದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಬ್ರಿಟನ್ ಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಅವರ, `ಇಂಡಿಯಾಸ್ ಡಾಟರ್...
ಇಂಡಿಯಾಸ್ ಡಾಟರ್
ಇಂಡಿಯಾಸ್ ಡಾಟರ್

ಭಾರತದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಬ್ರಿಟನ್ ಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಅವರ, `ಇಂಡಿಯಾಸ್ ಡಾಟರ್, ದಿ ಸ್ಟೋರಿ ಆಫ್  ಜ್ಯೋತಿ ಸಿಂಗ್'(ಭಾರತದ ಮಗಳು, ಇದು ಜ್ಯೋತಿ ಸಿಂಗ್ ಳ ಕಥೆ) ಸಾಕ್ಷ್ಯಚಿತ್ರದಲ್ಲಿ ನಿಜಕ್ಕೂ ಇರುವುದೇನು? ಅದು ಹೇಳುವುದೇನು?
ಇಲ್ಲಿದೆ ಕಿರುನೋಟ...
`ಜ್ಯೋತಿ'ಯ ಬಾಳನ್ನು ಅಂಧಕಾರಕ್ಕೆ ನೂಕಿದ 2012, ಡಿಸೆಂಬರ್ 16ರ ಆ ಕರಾಳ ರಾತ್ರಿಯಿಂದ ಹಿಡಿದು, ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗುವವರೆ
ಗಿನ ದಿನ(2013, ಸೆ.13)ದವರೆಗೂ ನಡೆದ ಎಲ್ಲ ಘಟನೆಗಳನ್ನೂ ಸಾಕ್ಷ್ಯಚಿತ್ರದಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಕೆಲ ವಿದ್ಯಮಾನಗಳನ್ನು ಘಟ
ನೆಯ ಮರುಸೃಷ್ಟಿಯ ಮೂಲಕ ವಿವರಿಸಲಾಗಿದೆ. ಸಾಕ್ಷ್ಯಚಿತ್ರದ ಆರಂಭ ದಲ್ಲೇ, ನಿರ್ಭಯಾಳ ಹೆತ್ತ ವರ(ಅಪ್ಪ-ಅಮ್ಮನ ಹೆಸರುಗಳನ್ನೂ ಉಲ್ಲೇಖಿಸಲಾ
ಗಿದೆ) ಸಹಕಾರ ದಿಂದ ಈ ಸಾಕ್ಷ್ಯಚಿತ್ರ ನಿರ್ಮಿ ಸಿರುವುದಾಗಿ ತಿಳಿಸಲಾಗಿದೆ. ಜತೆಗೆ, ಈ ಸಾಕ್ಷ್ಯ ಚಿತ್ರ ಪ್ರಸಾರಕ್ಕೆ ದೆಹಲಿ ಕೋರ್ಟ್ ನಿರ್ಬಂಧ ಹೇರಿದೆ ಎನ್ನುವ ಅಂಶವನ್ನೂ ಉಲ್ಲೇಖಿಸಲಾಗಿದೆ.


ಯಾರ್ಯಾರಿದ್ದಾರೆ?
ನಿರ್ಭಯಾಳ ತಂದೆ, ತಾಯಿ, ಸ್ನೇಹಿತ, ಗಲ್ಲುಶಿಕ್ಷೆಗೆ ಒಳಗಾಗಿ ತಿಹಾರ್ ಜೈಲಿನಲ್ಲಿರುವ ಮುಕೇಶ್ ಸಿಂಗ್, ಆತನ ಹೆತ್ತವರು, ಇತರೆ ಅಪರಾ„ಗಳ ಕುಟುಂಬ ಸದಸ್ಯರು,
ಅಪರಾಧಿಗಳ ಪರ ವಕೀಲರಾದ ಎ.ಪಿ.ಸಿಂಗ್ ಮತ್ತು ಎಂ.ಎಲ್. ಶರ್ಮಾ , ಮಹಿಳಾ ಪರ ಹೋರಾಟಗಾರರು, ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಬಸ್‍ನಿಂದ ಹೊರ
ಎಸೆಯಲ್ಪಟ್ಟ ನಿರ್ಭಯಾಳನ್ನು ಮೊದಲು ಕಂಡ ವ್ಯಕ್ತಿ, ಆಕೆಗೆ ಚಿಕಿತ್ಸೆ ನೀಡಿದ ವೈದ್ಯೆ, ಪೋಲೀಸ್ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶೆ ಲೀಲಾ ಸೇಥ್, ಆಕ್ಸ್ ಫರ್ಡ್
ವಿವಿ ಇತಿಹಾಸ ತಜ್ಞ , ದೆಹಲಿಯ ಅಂದಿನ ಸಿಎಂ ಶೀಲಾ ದೀಕ್ಷಿತ್, ಜೈಲಿನ ಮನಶ್ಶಾಸ್ತ್ರ ಜ್ಞ ಸೇರಿ ಹಲವರ ಅಭಿಪ್ರಾಯ ಗಳನ್ನು, ವಾದಗಳನ್ನು, ದೃಷ್ಟಿಕೋನಗಳನ್ನು
ಸಾಕ್ಷ್ಯಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.



ಅಪರಾಧಿಯ ಸಂದರ್ಶನವೇ ವಿವಾದದ ಕೇಂದ್ರ ಬಿಂದು


ಅಕ್ಷರಶಃ ಮೃಗಗಳಂತೆ ಅಸಹಾಯಕ ಯುವತಿಯೊ ಬ್ಬಳ ಮೇಲೆರಗಿ, ಆಕೆಗೆ ಚಿತ್ರಹಿಂಸೆ ನೀಡಿ ಕೊಂದ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್‍ನ ಸಂದರ್ಶನವೇ ಸಾಕ್ಷ್ಯಚಿತ್ರದ ಪ್ರಮುಖ ಅಂಶ. ಈಗ ವಿವಾದಕ್ಕೆ ಕಾರಣವಾಗಿರುವುದೂ ಈತನ ಹೇಳಿಕೆಗಳೇ. `ನಿರ್ಭಯಾ ಪ್ರತಿರೋಧ ತೋರದೇ ಇರುತ್ತಿದ್ದರೆ ಆಕೆ ಸಾಯುತ್ತಿರಲಿಲ್ಲ, ರಾತ್ರಿ 9 ಗಂಟೆಯ ನಂತರ ಮನೆಯಿಂದ ಹೊರಬರುವ ಮಹಿಳೆಯರು ಸಭ್ಯರೇ ಅಲ್ಲ' ಎನ್ನುವ ಮೂಲಕ ಆತ ತಾವು ಮಾಡಿದ ಹೀನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ. ಇಷ್ಟೇ ಅಲ್ಲ,
ಕಿಂಚಿತ್ತೂ ಪಶ್ಚಾತ್ತಾಪವಿಲ್ಲದ ಅಪರಾ„ಗಳು, ಹೆಣ್ಣುಮಕ್ಕಳನ್ನು ಭೋಗದ ವಸ್ತುವಂತೆ ನೋಡುವವರು, ಕರುಣೆಯಿಲ್ಲದ ಸಮಾಜದ ಬಗ್ಗೆ ಅನೇಕ ಪ್ರಶ್ನೆಗಳನ್ನೂ ಚಿತ್ರದಲ್ಲಿ ನಿರ್ಭಯಾಳ ಹೆತ್ತವರು ಎತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com