ನಮ್ಮ ಗಡಿಗೆ ಬಂದ್ರೆ ಭಾರತೀಯ ಮೀನುಗಾರರಿಗೆ ಗುಂಡು ಹೊಡೆಯುತ್ತೇವೆ: ಲಂಕಾ ಪ್ರಧಾನಿ

ಶ್ರೀಲಂಕಾ ಗಡಿಯೊಳಕ್ಕೆ ಅಕ್ರಮವಾಗಿ ಪ್ರವೇಶಿಸಿದರೆ ಭಾರತೀಯ ಮೀನುಗಾರರಿಗೆ ಗುಂಡು ಹೊಡೆಯುತ್ತೇವೆ ಎಂದು ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮಸಿಂಘೆ ಹೇಳಿ ವಿವಾದ ಸೃಷ್ಟಿಸಿದ್ದಾರೆ.
ರೆನಿಲ್ ವಿಕ್ರಮಸಿಂಘೆ
ರೆನಿಲ್ ವಿಕ್ರಮಸಿಂಘೆ

ಕೊಲಂಬೊ: ಶ್ರೀಲಂಕಾ ಗಡಿಯೊಳಕ್ಕೆ ಅಕ್ರಮವಾಗಿ ಪ್ರವೇಶಿಸಿದರೆ ಭಾರತೀಯ ಮೀನುಗಾರರಿಗೆ ಗುಂಡು ಹೊಡೆಯುತ್ತೇವೆ ಎಂದು ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮಸಿಂಘೆ ಹೇಳಿ ವಿವಾದ ಸೃಷ್ಟಿಸಿದ್ದಾರೆ.

ಮುಂದಿನ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಬೆನ್ನಲ್ಲಿಯೇ ರೆನಿಲ್ ವಿಕ್ರಮ ಸಿಂಘೆ ಈ ರೀತಿ ಹೇಳಿಕೆ ನೀಡಿದ್ದಾರೆ.

ಪದೇ ಪದೇ ಕಡಲ ಗಡಿಯನ್ನು ಭಾರತೀಯ ಮೀನುಗಾರರು ದಾಟುತ್ತಿದ್ದು ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಮನೆಯನ್ನು ನಾವು ಭದ್ರತೆಯಿಂದ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಹಾಗಾಗಿ ಒಂದೊಮ್ಮೆ ಭಾರತೀಯ ಮೀನುಗಾರರು ಅಕ್ರಮವಾಗಿ ಶ್ರೀಲಂಕಾದ ಕಡಳ ವ್ಯಾಪ್ತಿಯನ್ನು ಪ್ರವೇಶಿಸಿದರೆ ಗುಂಡು ಹೊಡೆದು ಸಾಯಿಸುತ್ತೇವೆ ಎಂದು ರೆನಿಲ್ ವಿಕ್ರಮ್ ಸಿಂಘೆ ಎಚ್ಚರಿಕೆ ನೀಡಿದ್ದಾರೆ.


ಶ್ರೀಲಂಕಾ ಪ್ರಧಾನಿಯವರ ಈ ಹೇಳಿಕೆ ಇದೀಗ ವಿವಾದ ಸೃಷ್ಟಿಸಿರುವುದಲ್ಲದೇ ಭಾರತ ಮತ್ತು ಶ್ರೀಲಂಕಾ ನಡುವಿನ  ಬಾಂಧವ್ಯಕ್ಕೆ ಕುಂದು ಬರುವ ಸಾಧ್ಯತೆ ಇದೆ. ಅಲ್ಲದೇ ಮುಂದಿನ ವಾರ ಪ್ರಧಾನಿ ಮೋದಿ ಅವರು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು ಈ ಕುರಿತು ಮಾತುಕತೆ ನಡೆಸುವ ಸಾಧ್ಯತೆ ನಿಚ್ಚಳವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com