ಕೆಂಪು ಗ್ರಹದಲ್ಲೂ ಬಡಿಯುತ್ತಿತ್ತು ಸಮುದ್ರದ ಅಲೆ!

ಒಂದಾನೊಂದು ಕಾಲದಲ್ಲಿ ಮಂಗಳನಲ್ಲೂ ಸಮುದ್ರದ ಒರೆತವಿತ್ತಂತೆ. ಅದು ಆರ್ಕ್ ಟಿಕ್ ಸಾಗರದಷ್ಟು ದೊಡ್ಡದಿತ್ತಂತೆ!
ಮಂಗಳಗ್ರಹ
ಮಂಗಳಗ್ರಹ

ನವದೆಹಲಿ: ಒಂದಾನೊಂದು ಕಾಲದಲ್ಲಿ ಮಂಗಳನಲ್ಲೂ ಸಮುದ್ರದ ಒರೆತವಿತ್ತಂತೆ. ಅದು ಆರ್ಕ್ ಟಿಕ್ ಸಾಗರದಷ್ಟು ದೊಡ್ಡದಿತ್ತಂತೆ!

ಹೀಗೆಂದು ಹೇಳಿದ್ದು ನಾಸಾ ವಿಜ್ಞಾನಿಗಳು. ಲಕ್ಷಾಂತರ ವರ್ಷಗಳ ಹಿಂದೆ ಕೆಂಪು ಗ್ರಹದ ಉತ್ತರ ಗೋಳಾರ್ಧದಲ್ಲಿನ ತಗ್ಗುಪ್ರದೇಶ ದಲ್ಲಿ ಸಾಗರವೊಂದು ವ್ಯಾಪಿಸಿತ್ತು ಎನ್ನುವ ಅಂಶವನ್ನು ವಿಜ್ಞಾನಿಗಳು ಹೊರಹಾಕಿದ್ದಾರೆ.

ಇದು ದೃಢವಾದರೆ, ಮಂಗಳ ಗ್ರಹದ ಇತಿಹಾಸವನ್ನು ಕಂಡುಕೊಳ್ಳಲು ಹಾಗೂ ಅದು ವಾಸಯೋಗ್ಯ ಗ್ರಹವಾಗಿತ್ತು ಎಂಬುದನ್ನು ಸಾಬೀತುಪಡಿಸಲು ನೆರವಾ ಗಲಿದೆ ಎಂದೂ ನಾಸಾ ಹೇಳಿದೆ.

ಮಂಗಳನಲ್ಲಿ ಇಸ್ರೋ ಹೋಳಿ

ಕೆಂಪು ಗ್ರಹದಲ್ಲಿ ಶುಕ್ರವಾರ ಇಸ್ರೋ ಹೋಳಿ ಹಬ್ಬ ಆಚರಿಸಿದೆ. ಮಂಗಳಯಾನದ ಮಾರ್ಸ್ ಕಲರ್ ಕ್ಯಾಮೆರಾದ ಮೂಲಕ ಸೆರೆಹಿಡಿದ ಕೆಂಪುಗ್ರಹದ ಬಣ್ಣದ ಚಿತ್ರಗಳನ್ನು ಇಸ್ರೋ ಬಿಡುಗಡೆ ಮಾಡಿದೆ.

ಸೌರವ್ಯೂಹದ ಅತಿದೊಡ್ಡ ಜ್ವಾಲಾಮುಖಿ, ಮಂಗಳನ ಮೇಲ್ಮೈನಲ್ಲಿನ ಕಣಿವೆಗಳು ಮತ್ತು ಪರ್ವತಗಳ ಚಿತ್ರಗಳೂ ಇವುಗಳಲ್ಲಿ ಸೇರಿವೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com