
ನವದೆಹಲಿ: ಪ್ರತಿ ಮೂರು ದಿಕ್ಕೊಮ್ಮೆ ಒಬ್ಬ ಯೋಧ ಭಾರತೀಯ ಅರೆಸೇನಾ ಪಡೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ.
ಈಶಾನ್ಯ ಭಾಗದಲ್ಲೇ 2012 ರಿಂದ 2014 ರವೆಗೆ 370 ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದರಿಂದ ಸಿಆರ್ ಪಿಎಫ್ ಪಡೆದು ಬಲ ಕುಸಿಯುತ್ತಿದೆ ಎನ್ನುವ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಇದಲ್ಲದೆ 2014ರಲ್ಲಿ ಪ್ರತಿ ದಿನಕ್ಕೆ 20 ಯೋಧರಂತೆ 6 ಸಾವಿರ ಮಂದಿ ಸಿಆರ್ ಪಿಎಫ್ ಅನ್ನು ತೊರೆದಿದ್ದಾರೆ. 2013 ರಲ್ಲಿ 4, 186 ಮಂದಿ ದೇಶದ ಅತಿದೊಡ್ಡ ಅರೆಸೇನಾ ಪಡೆಯಾದ ಸಿಆರ್ ಪಿಎಫ್ ತೊರೆದಿದ್ದಾರೆ. ಭಾರತದ ಅರೆಸೇನಾ ಪಡೆ ಯೋಧರು ಶತ್ರುಗಳ ಗುಂಡಿನ ದಾಳಿಗೆ ಬಲಿಯಾಗುತ್ತಿಲ್ಲ, ಆದರೆ ಕಳೆಪೆ ಸೌಲಭ್ಯಗಳು, ಒತ್ತಡಗಳೇ ಅವರನ್ನು ಕೊಲ್ಲುತ್ತಿವೆ.
ಈಶಾನ್ಯದ ಕಾಡುಗಳಲ್ಲಿ ನಕ್ಸಲರ ವಿರುದ್ಧ ಹೋರಾಟಕ್ಕಿಂತ ಯೋಧರನ್ನು ಅವರ ದುಸ್ಥಿತಿಯೇ ಸಾವಿನ ಬಾಯಿಗೆ ತಳ್ಳುತ್ತಿದೆ. ಹೃದಯಾಘಾತ, ಮಲೇರಿಯಾ, ಮತ್ತು ಎಚ್ ಐವಿ ಕಾಯಿಲೆಗಳಿಗೆ 1, 131 ಯೋಧರು ಕಳೆದ 5 ವರ್ಷಗಳಲ್ಲಿ ಮೃತಪಟ್ಟಿದ್ದಾರೆ. ನಕ್ಸಲರಿಗೆ ಬಲಿಯಾಗಿರುವುದು 323 ಸೈನಿಕರು ಮಾತ್ರ.ಕಾಡುವಾಸ, ನಕ್ಸಲರೊಂದಿಗೆ ಕಾಳಗ, ಈಶಾನ್ಯದ ಹಿಮಪರ್ವತಗಳ ಕೊರೆಯುವ ಚಳಿ ನಡೆಸುತ್ತಿರುವ ಅವರಿಗೆ ಶೌಚಾಲಯ ಸೇರಿದಂತೆ ಯಾವುದೇ ಅಗತ್ಯ ಮೂಲ ಸೌಲಭ್ಯಗಳಿಲ್ಲ. ಇದರಿಂದ ಸೈನ್ಯದಿಂದ ಯೋಧರು ವಿಮುಖರಾಗುತ್ತಿದ್ದಾರೆ ಎನ್ನಲಾಗಿದೆ.
Advertisement