ಜಮ್ಮು ಮತ್ತು ಕಾಶ್ಮೀರ ಸಿಎಂ 'ಪ್ರತ್ಯೇಕವಾದಿಗಳ ಗಾಡ್‌ಫಾದರ್‌'

ಮುಫ್ತಿ ಮೊಹಮ್ಮದ್ ಸಯೀದ್ ಹಾಗೂ ಪುತ್ರಿ ಮೆಹಬೂಬಾ ಮುಫ್ತಿ
ಮುಫ್ತಿ ಮೊಹಮ್ಮದ್ ಸಯೀದ್ ಹಾಗೂ ಪುತ್ರಿ ಮೆಹಬೂಬಾ ಮುಫ್ತಿ

ಮುಂಬೈ: ಪ್ರತ್ಯೇಕವಾದಿ ನಾಯಕ ಮಸಾರತ್ ಆಲಂ ಬಿಡುಗಡೆಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಶಿವಸೇನೆ, ಜಮ್ಮು ಮತ್ತು ಕಾಶ್ಮೀರ ಸಿಎಂ 'ಪ್ರತ್ಯೇಕವಾದಿಗಳ ಗಾಡ್‌ಫಾದರ್‌' ಎಂದು ಕರೆದಿದೆ. ಅಲ್ಲದೆ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದೆ.

'ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ಈಗ ಒಬ್ಬ ಗಾಡ್‌ಫಾದರ್ ಸಿಕ್ಕಂತಾಗಿದೆ ಮತ್ತು ಮುಫ್ತಿ ಮೊಹಮ್ಮದ್ ಸಯೀದ್ ಅವರಿಂದ ಪ್ರತ್ಯೇಕವಾದಿಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ' ಎಂದು ಶಿವಸೇನೆ ತನ್ನ ಮುಖವಾಣಿ 'ಸಾಮನ'ದ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ಮಸಾರತ್ ಆಲಂ ಬಿಡುಗಡೆ ಮಾಡುವ ಮೂಲಕ ಉಗ್ರರಿಗೆ ಸಹಕಾರ ನೀಡಿದಂತಾಗುತ್ತದೆ ಎಂದಿರುವ ಶಿವಸೇನೆ, ಈ ಕೂಡಲೇ ಮುಫ್ತಿ ಸಯೀದ್ ಅವರನ್ನು ಬಂಧಿಸಿ, ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com