ಕೆಟ್ಟ ಯೋಜನೆ, ಅಂದಾಜುಗಳೇ ಆಪ್ ನ ನಿಜವಾದ ವಾಸ್ತವತೆ: ಯೋಗೇಂದ್ರ ಸಿಂಗ್
ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಚು ತಾರಕ್ಕೇರಿದ್ದು, ಕಳಪೆ ಯೋಜನೆ ಹಾಗೂ ಕೆಟ್ಟ ಅಂದಾಜುಗಳೇ ಆಪ್ ನ ನಿಜವಾದ ವಾಸ್ತವತೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಆಮ್ ಆಮ್ ಆದ್ಮಿ ಪಕ್ಷದ ಯೋಜನೆಯ ವಿಷಯದ ಕುರಿತಂತೆ ಇಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದ ಯೋಗೇಂದ್ರ ಯಾದವ್ ಅವರು, ಆಮ್ ಆದ್ಮಿ ಪಕ್ಷದ ವಾಸ್ತವಾಂಶದಿಂದ ನಾನು ಪಡೆಯಬೇಕಾದದ್ದು ಏನೂ ಇಲ್ಲ. ಆದರೆ ಪಕ್ಷದ ಯೋಜನೆಗಳು ಹಾಗೂ ಅಂದಾಜಿನ ಲೆಕ್ಕಾಚಾರದ ಕುರಿತಂತೆ ಆಸಕ್ತಿ ಇದೆ. ನಾವು ಚಿಂತಿಸುವುದು, ಅಂದುಕೊಳ್ಳುವುದಾವುದು ಹಾಗೆ ಇರುವುದಿಲ್ಲ. ಅವುಗಳ ನಿಜವಾದ ವಾಸ್ತವಾಂಶಗಳೇ ಬೇರೆ ಇರುತ್ತದೆ ಎಂದು ಹೇಳಿದ್ದಾರೆ.
ನಾನು ಆಧ್ಯಾತ್ಮಿಕ ಅನುಯಾಯಿಲ್ಲ. ಆದರೂ ಸಂದರ್ಭದಲ್ಲಿ ನನ್ನ ಕಲ್ಪನೆಗಳು ಉಪಯೋಗವಾಗುತ್ತದೆ. ಕಲ್ಪನೆಗೂ ವಾಸ್ತವಾಂಶಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಆಮ್ ಆದ್ಮಿ ಪಕ್ಷದ ವಿದ್ಯಾಮಾನಗಳನ್ನು ನಿಜವಾಗಿ ಅಧ್ಯಯನ ಮಾಡಿದರೆ ವಾಸ್ತವಿಕ ಸತ್ಯ ನಿಮಗೆ ತಿಳಿಯುತ್ತದೆ. ಯಾವುದೇ ಕೆಲಸವನ್ನು ನಾವು ಸಾಧಿಸಬೇಕಾದರೆ ಪ್ರತ್ಯೇಕ ಗುರಿ ಹಾಗೂ ಆದರ್ಶಗಳನ್ನು ಹೊಂದಿರುತ್ತೇವೆ. ಆ ಕೆಲಸವನ್ನು ಸಾಧಿಸಬೇಕಾಗದರೆ ಬಹಳ ಕಠಿಣ ಪ್ರಯತ್ನಗಳನ್ನು ಮಾಡುತ್ತೇವೆ. ಈ ಪ್ರಯತ್ನದಲ್ಲಿ ಕೆಲವೊಮ್ಮೆ ಗೆಲುವು ಕಾಣುತ್ತೇವೆ, ಕೆಲವೊಮ್ಮೆ ವಿಫಲವಾಗುತ್ತೇವೆ ಆದರೆ ಆಪ್ ಪಕ್ಷ ಗೆಲುವು ಸಾಧಿಸುವ ಸಲುವಾಗಿ ಪ್ರಯೋಗಗಳನ್ನು ಮಾಡುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ