ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್‍
ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್‍

ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ನಶೀದ್‍ಗೆ ಜೈಲು

ಆಂತರಿಕ ಕ್ಷೋಭೆಯಿಂದ ನಲುಗಿ ಹೋಗಿರುವ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್‍ಗೆ ಅಲ್ಲಿನ ಭಯೋತ್ಪಾದನಾ ವಿರೋಧಿ ಕೋರ್ಟ್ 13 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ...

ನವದೆಹಲಿ/ಮಾಲೆ: ಆಂತರಿಕ ಕ್ಷೋಭೆಯಿಂದ ನಲುಗಿ ಹೋಗಿರುವ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್‍ಗೆ ಅಲ್ಲಿನ ಭಯೋತ್ಪಾದನಾ ವಿರೋಧಿ ಕೋರ್ಟ್ 13 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ನಶೀದ್ ವಿರುದ್ಧ  ಭಯೋತ್ಪಾದನಾ ಕೃತ್ಯದಲ್ಲಿ ಪಾಲ್ಗೊಂಡ ಆರೋಪ ಹೊರಿಸಲಾಗಿದೆ. ಗುರುವಾರ ತಡರಾತ್ರಿ ನಡೆದ ವಿಚಾರಣೆ ವೇಳೆ ವಿಶೇಷ ಕೋರ್ಟ್ ಈ ಆದೇಶ ನೀಡಿದೆ. ನ್ಯಾಯಾಧೀಶರೊಬ್ಬರನ್ನು ಅಕ್ರಮ ವಾಗಿ ಬಂಧಿಸಿದ ಪ್ರಕರಣಕ್ಕೆ ಸಂಬಂ„ಸಿ ದಂತೆ ಫೆ.22ರಂದು ನಶೀದ್‍ರನ್ನು ಬಂಧಿಸಲಾಗಿತ್ತು. 2008ರಲ್ಲಿ 30 ವರ್ಷಗಳ ಮೌಮಾನ್ ಅಬ್ದುಲ್ಗಯೂಮ್ ರ ಸರ್ವಾಧಿಕಾರಿ ಆಡಳಿತ ಕೊನೆಗೊಳಿಸಿ ಪ್ರಜಾಸತ್ತಾತ್ಮಕವಾಗಿ ನಡೆದ ಮೊದಲ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2012ರಲ್ಲಿ ಜಡ್ಜ್ ಒಬ್ಬರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಅವರು ರಾಜಿನಾಮೆ ನೀಡಿದ್ದರು.

ಭಾರತ ಕಳವಳ: ಈ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಇದೊಂದು ಉತ್ತಮ ಬೆಳವಣಿಗೆಯಲ್ಲ. ಪ್ರಕರಣವನ್ನು ಕಾನೂನು ಕ್ರಮದಲ್ಲಿಯೇ ಪರಿಹರಿಸಿಕೊಳ್ಳಬೇಕೆಂದು ಸೂಚಿಸಿದೆ. ಫೆಬ್ರವರಿಯಲ್ಲಿ ನಶೀದ್‍ರನ್ನು ಪೊಲೀಸರು ಥಳಿಸಿ, ಬಂಧಿಸಿ ಕೋರ್ಟ್‍ಗೆ ಹಾಜರುಪಡಿಸಿದ್ದರು. 2013ರಲ್ಲಿ ಇದೇ ಪ್ರಕರಣದಲ್ಲಿ ಬಂಧನ ತಪ್ಪಿಸಿಕೊಳ್ಳಲು ನಶೀದ್ ಮಾಲೆಯಲ್ಲಿರುವ ಭಾರತೀಯ ಹೈಕಮಿಷನ್‍ನಲ್ಲಿ ಆಶ್ರಯ ಪಡೆದಿದ್ದರು.

Related Stories

No stories found.

Advertisement

X
Kannada Prabha
www.kannadaprabha.com