ಸಿಗಲಿ ಸಮಪಾಲು, ಸಮಬಾಳು

ತಮಿಳರೂ ಸೇರಿದಂತೆ ಶ್ರೀಲಂಕಾದಲ್ಲಿ ಎಲ್ಲ ಪ್ರಜೆಗಳು ಸಮಾನರಾಗಿ ಬದುಕಬೇಕು. ಹೀಗೆಂದು ಆಶಯ ವ್ಯಕ್ತಪಡಿಸಿದ್ದು ಪ್ರಧಾನಿ ನರೇಂದ್ರ...
ನರೇಂದ್ರ ಮೋದಿ (ಚಿತ್ರ ಕೃಪೆ : AP)
ನರೇಂದ್ರ ಮೋದಿ (ಚಿತ್ರ ಕೃಪೆ : AP)

ಜಾಫನಾ /ಕೊಲಂಬೋ: ತಮಿಳರೂ ಸೇರಿದಂತೆ ಶ್ರೀಲಂಕಾದಲ್ಲಿ ಎಲ್ಲ ಪ್ರಜೆಗಳು ಸಮಾನರಾಗಿ ಬದುಕಬೇಕು. ಹೀಗೆಂದು ಆಶಯ ವ್ಯಕ್ತಪಡಿಸಿದ್ದು ಪ್ರಧಾನಿ ನರೇಂದ್ರ ಮೋದಿ. ದ್ವೀಪ ರಾಷ್ಟ್ರದ ಪ್ರವಾಸದ ಕೊನೆಯ ದಿನ ಜರ್ಜರಿತ ವಾಗಿದ್ದ ಜಾಫ್ನಾಗೆ ಭೇಟಿ ನೀಡಿದ ವೇಳೆ ಅವರು ಈ ಮಾತುಗಳನ್ನಾಡಿದ್ದಾರೆ. ಇದೇ ಸಂದರ್ಭ ದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ನಿರ್ಮಿಸಲಾಗುವ ಸಾಂಸ್ಕೃತಿಕ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದರು ಪ್ರಧಾನಿ.
ಮನೆಗಳ ಹಸ್ತಾಂತರ: ಇಲ್ಲವಾಲೈ ಎಂಬಲ್ಲಿಆಂತರಿಕ ಯುದ್ಧದಿಂದ ನೊಂದಿರುವ ಕುಟುಂಬಗಳಿಗೆ ಭಾರತ ಸರ್ಕಾರದ ನೆರವಿನಿಂದ ನಿರ್ಮಿಸಲಾಗಿರುವ 27 ಸಾವಿರ
ಮನೆಗಳನ್ನು ಹಸ್ತಾಂತರಿಸಿದರು. ಪ್ರವಾಸದ ವೇಳೆ ಯುದ್ಧದಿಂದ ನೊಂದಿರುವ ಕುಟುಂಬ ಸದಸ್ಯರ ಜತೆ ಬಿಗುಮಾನ ಬಿಟ್ಟು ಪ್ರಧಾನಿ ಮೋದಿ ಬೆರೆತರು. ಈ ಮೂಲಕ ಅವರು ತಮ್ಮ ಸರಳತೆ ಮೆರೆದರು. ಜತೆಗೆ ಮುಂದಿನ ಹಂತದಲ್ಲಿ 47 ಸಾವಿರ ಮನೆಗಳ ನಿರ್ಮಾಣ ಮಾಡಲಾಗುತ್ತದೆ ಎಂದರು ನರೇಂದ್ರ ಮೋದಿ.

ರೈಲಿಗೆ ಚಾಲನೆ: ಆಂತರಿಕ ಯುದ್ಧದ ವೇಳೆ ಸಂಪೂರ್ಣ ನಾಶವಾಗಿ ಹೋಗಿದ್ದ ಜಾಫ್ನ ಪ್ರದೇಶದ ತಲೈಮುನ್ನಾರ್ ಪಿಯರ್-ಮಧು ರೋಡ್ ಎಂಬಲ್ಲಿಗೆ ಪುನರ್ ನಿರ್ಮಿಸಲಾಗಿರುವ ಬ್ರಾಡ್‍ಗೇಜ್ ರೈಲು ಮಾರ್ಗವನ್ನು ಮೋದಿ ಉದ್ಘಾಟಿಸಿದರು. ಕೇಂದ್ರ ಸರ್ಕಾರದ ನೆರವಿನಿಂದ ನಿರ್ಮಿಸಲಾಗಿರುವ 63 ಕಿಮೀ ದೂರದ ಈ ಯೋ ಜನೆಯನ್ನು ಶ್ರೀಲಂಕಾದ ಉತ್ತರ ರೈಲ್ವೆ ಪುನರ್ ನಿರ್ಮಾಣ ಯೋಜನೆ (ಎನ್ ಆರ್‍ಎಲ್‍ಆರ್‍ಪಿ) ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com