ಗಾಂಧಿ ಜಯಂತಿ ರಜೆ ವಿವಾದ: ರಜಾದಿನಗಳ ಸಂಖ್ಯೆಯನ್ನು ಕಡಿಮೆ ಮಾಡುವ ಅಗತ್ಯವಿದೆ ಆರ್ ಎಸ್ಎಸ್

ಗಾಂಧಿ ಜಯಂತಿ (ಅ.2) ಸಾವ್ರಜನಿಕ ರಜೆ ತೆಗೆದುಹಾಕಿರುವ ಗೋವಾ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ...
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಶಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಶಿ

ನಾಗ್ಪುರ: ಗಾಂಧಿ ಜಯಂತಿ (ಅ.2) ಸಾರ್ವಜನಿಕ ರಜೆ ತೆಗೆದುಹಾಕಿರುವ ಗೋವಾ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಶಿ, ಗಾಂಧಿ ಜಯಂತಿ ರಜೆ ಕುರಿತಂತೆ ಗೋವಾ ಈ ರೀತಿಯ ತೀರ್ಮಾನ ಯಾವ ಕಾರಣಕ್ಕೆ ತೆಗೆದುಕೊಂಡಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಸೋಮವಾರ ಹೇಳಿದ್ದಾರೆ.

ವಿವಾದ ಕುರಿತಂತೆ ಇಂದು ಮಾಧ್ಯಮದವರೊಂದಿಗೆ ಮಾತನಾಡಿರುವ ಸುರೇಶ್ ಜೋಶಿ ಅವರು, ದೇಶದಲ್ಲಿ ಸಾರ್ವಜನಿಕ ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವುಗಳನ್ನು ಕಡಿತಗೊಳಿಸಬೇಕು ನಿಜ. ಆದರೆ, ಗಾಂಧಿ ಜಯಂತಿಯ ದಿನದಂದಿರುವ ಸಾರ್ವಜನಿಕ ರಜೆಯನ್ನು ಯಾವ ಕಾರಣಕ್ಕೆ ಗೋವಾ ಸರ್ಕಾರ ತೆಗೆದುಹಾಕಿದೆ ಎಂಬುದು ಅರ್ಥವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಹೇಳಿದ್ದಾರೆ.

ಗೋವಾ ಸರ್ಕಾರ ಗಾಂಧಿ ಜಯಂತಿ (ಅ.2)ಗೆ ಅಧಿಕೃತ ರಜೆ ನೀಡಿದೆಯೋ ಇಲ್ಲವೋ ಎಂಬ ವಿಚಾರದ ಬಗ್ಗೆ ಭಾನುವಾರ ಗೊಂದಲ ಉಂಟಾಗಿತ್ತು. ಮಧ್ಯಾಹ್ನದ ವೇಳೆಗೆ ಇದ್ದಕ್ಕಿದ್ದಂತೆ ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಬಿಜೆಪಿ ಸರ್ಕಾರ ಅಧಿಕೃತ ರಜೆಗಳ ಪಟ್ಟಿಯಿಂದ ಗಾಂಧಿ ಜಯಂತಿಯನ್ನು ತೆಗೆದು ಹಾಕಿದೆ ಎಂಬ ಸುದ್ದಿಯನ್ನು ಪ್ರಸಾರ ಮಾಡಿತ್ತು. ಅಷ್ಟೇ ಅಲ್ಲದೆ, ಈ ಸುದ್ದಿ ಫೇಸ್‍ಬುಕ್, ಟ್ವಿಟರ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com