ಗುವಾಹಟಿ: ಮಸೀದಿ ಧಾರ್ಮಿಕ ಸ್ಥಳವೇನೂ ಅಲ್ಲ. ಅದು ಕೇವಲ ಕಟ್ಟಡ. ಅದನ್ನು ಯಾವುದೇ ಸಮಯದಲ್ಲಿ ಬೇಕಾದರೂ ಧ್ವಂಸ ಮಾಡಬಹುದು.
ಇದರ ಬಗ್ಗೆ ಯಾರಿಗಾದರೂ ಅಸಮ್ಮತಿ ಇದ್ದರೆ, ಅವರೊಂದಿಗೆ ಚರ್ಚಿಸಲು ಸಿದ್ಧ. ನಾನು ಸೌದಿ ಅರೇಬಿಯನ್ನರಿಂದಲೇ ಈ ಮಾಹಿತಿ ಪಡೆದಿದ್ದೇನೆ ಎಂದು ವಿವಾದಿತ ಹೇಳಿಕೆ ನೀಡಿದ್ದ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಸ್ಸಾಂನಲ್ಲಿ ಉಂಟಾದ ಗಲಭೆಗೆ ಹಿಂದೂ ಮುಸ್ಲಿಮರ ಮತೀಯ ಕಲಹ ಕಾರಣ ಎಂದು ಹೇಳಿಕೆ ನೀಡಿದ್ದ ಸ್ವಾಮಿ ವಿರುದ್ಧ ಕೃಷಿಕ್ ಮುಕ್ತಿ ಸಂಗಮ್ ಸಮಿತಿ(ಕೆಎಂಎಸ್ಎಸ್) ದೂರು ನೀಡಿದೆ.