
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಜೆಡಿಯು ನಾಯಕ ಶರದ್ ಯಾದವ್ ಅವರು ತಮ್ಮ ಹೇಳಿಕೆಗೆ ಬುಧವಾರ ವಿಷಾದ ವ್ಯಕ್ತಪಡಿಸಿದ್ದಾರೆ.
ನೀವು ಯಾವ ರೀತಿಯ ವ್ಯಕ್ತಿ ಎಂಬುದು ನನಗೆ ಗೊತ್ತಿದೆ ಎಂದು ಸ್ಮೃತಿ ಇರಾನಿಯವರಿಗೆ ಹೇಳಿದ ಮಾತಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ಹೇಳಿಕೆ ಕುರಿತಂತೆ ನನಗೆ ವಿಷಾದವಿದೆ ಜೆಡಿಯು ಹಿರಿಯ ನಾಯಕ ಶರದ್ ಯಾದವ್ ಎಂದು ಹೇಳಿದ್ದಾರೆ.
ಕಳೆದ ವಾರ ಸದನದಲ್ಲಿ ವಿಮಾ ಮಸೂದೆ ಕುರಿತಂತೆ ಮಹತ್ವದ ಚರ್ಚೆ ನಡೆಯುವ ಸಂದರ್ಭದಲ್ಲಿ ಜೆಡಿಯು ಹಿರಿಯ ನಾಯಕ ಶರದ್ ಯಾದವ್ ಇದ್ದಕ್ಕಿದ್ದಂತೆ ದಕ್ಷಿಣ ಭಾರತದ ಮಹಿಳೆಯರು ಕಪ್ಪಗಿದ್ದರು ಸುಂದರಿಯರು ಎಂದು ಹೇಳಿದ್ದರು. ಈ ಹೇಳಿಕೆ ಸಂಸತ್ ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತಲ್ಲದೇ, ಕ್ಷಮಾಪಣೆ ಕೋರುವಂತೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹಾಗೂ ಡಿಎಂಕೆ ಸದಸ್ಯೆ ಕನಿಮೊಳಿ ಅವರು ಪಟ್ಟು ಹಿಡಿದಿದ್ದರು.
ಮಾತಿಮಾತಿಗೆ ಬೆಳೆಯುತ್ತಿದ್ದಂತೆ ಶರದ್ ಯಾದವ್ ಅವರು ಸ್ಮೃತಿ ಇರಾನಿ ಅವರಿಗೆ ನೀವು ಯಾವ ರೀತಿಯ ವ್ಯಕ್ತಿ ಎಂಬುದು ನನಗೆ ಗೊತ್ತಿದೆ ಎಂದು ಹೇಳಿದ್ದರು.
ಈ ಹೇಳಿಕೆ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿತ್ತು. ವಿವಾದ ಕುರಿತಂತೆ ಲೋಕಸಭೆಯಲ್ಲಿ ಇಂದು ನಡೆದ ಅಧಿವೇಶನದ ವೇಳೆ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇದೊಂದು ಅನುಚಿತ ಹೇಳಿಕೆಯಾಗಿದ್ದು, ತಮ್ಮ ಹೇಳಿಕೆ ವಿವಾದ ಸೃಷ್ಟಿಸಿದೆ. ಹಾಗಾಗಿ ನಿಮ್ಮ ಹೇಳಿಕೆ ಕುರಿತಂತೆ ಸ್ಪಷ್ಟತೆ ನೀಡಿ ಎಂದು ಹೇಳಿದ್ದರು.
ವಿವಾದ ಕುರಿತಂತೆ ಇಂದು ಹೇಳಿಕೆ ನೀಡಿರುವ ಶರದ್ ಯಾದವ್ ಅವರು ಸ್ಮೃತಿ ಇರಾನಿ ಅವರ ಬಗ್ಗೆ ನನಗೆ ಗೌರವವಿದೆ. ಹಾಗಾಗಿಯೇ ಸ್ಮೃತಿ ಇರಾನಿ ಅವರ ಪದವಿ ಕುರಿತಂತೆ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿದ್ದಾಗ, ಅವರ ಹಿಂದೆ ನಿಂತು ರಕ್ಷಣೆ ಮಾಡಿದೆ. ನಾನು ರಾಜಕೀಯ ವಿಜ್ಞಾನ ಓದಿರದಿರಬಹುದು ಆದರೆ ಇಂಜಿನಿಯರ್ ಆಗಿದ್ದೇನೆ ಎಂದು ಹೇಳಿದ್ದಾರೆ.
Advertisement