ಸನ್ಯಾಸಿನಿ ಅತ್ಯಾಚಾರ ಪ್ರಕರಣ: ನೊಂದ ಸನ್ಯಾಸಿನಿ ಗುಣಮುಖ, ಆಸ್ಪತ್ರೆಯಿಂದ ಬಿಡುಗಡೆ

71 ವರ್ಷದ ಕ್ರೈಸ್ತ ಸನ್ಯಾಸಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸನ್ಯಾಸಿನಿ...
ಪ್ರತಿಭಟನಾನಿರತ ಕ್ರೈಸ್ತ ಸನ್ಯಾಸಿನಿಯರ ಸಂಗ್ರಹ ಚಿತ್ರ
ಪ್ರತಿಭಟನಾನಿರತ ಕ್ರೈಸ್ತ ಸನ್ಯಾಸಿನಿಯರ ಸಂಗ್ರಹ ಚಿತ್ರ

ರಾಣಾಘಾಟ್: 71 ವರ್ಷದ ಕ್ರೈಸ್ತ ಸನ್ಯಾಸಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸನ್ಯಾಸಿನಿ ಇದೀಗ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಲು ತಯಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸನ್ಯಾಸಿನಿ ಈಗಾಗಲೇ ಗುಣಮುಖರಾಗಿದ್ದು, ಆಹಾರ, ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅವರನ್ನು ಬಿಡುಗಡೆಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಆದರೆ ಈವರೆಗೂ ಕಾನ್ವೆಂಟ್ ನ ಅಧಿಕಾರಿಗಳೊಂದಿಗೆ ಸಂವಹನ ಸಾಧ್ಯವಾಗಿಲ್ಲ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸನ್ಯಾಸಿನಿ ಮೇಲಾದ ಅತ್ಯಾಚಾರ ವಿರೋಧಿಸಿ ಪಶ್ಚಿಮ ಬಂಗಾಳದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಘಟನೆ ಮರುಕಳಿಸಿದಂತೆ , ಪ್ರಕರಣವನ್ನು ಸಿಬಿಐ ವಿಚಾರಣೆಗೆ ಒಪ್ಪಿಸಿ ಕ್ರಮ ಕೈಗೊಂಡಿದ್ದರು.

ನಾಡಿಯಾ ಜಿಲ್ಲೆಯ ಗಂಗ್ನಾಪುರದಲ್ಲಿರುವ ಕಾನ್ವೆಂಟ್ ಗೆ ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಒಳ ನುಗ್ಗಿದ ರೌಡಿಗಳು ಹಣ ದೋಚಲು ಮುಂದಾಗಿದ್ದಾರೆ. ಈ ವೇಳೆ ರೌಡಿಗಳನ್ನು ಕಂಡ ಸನ್ಯಾಸಿನಿ ಹಣದೋಚಲು ಬಿಡದೆ ತಡೆವೊಡ್ಡಿದ್ದಾರೆ. ಸನ್ಯಾಸಿನಿಯ ವರ್ತನೆಯಿಂದ ತೀವ್ರ ಕೆಂಡಾಮಂಡಲವಾದ ರೌಡಿಗಳು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ನಂತರ ಸ್ಥಳದಲ್ಲಿ ಅಲ್ಮೆರಾದಲ್ಲಿದ್ದ 12 ಲಕ್ಷವನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದರು.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣದಲ್ಲಿ 4 ನಾಲ್ವರು ಆರೋಪಿಗಳು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.ಆದರೆ ಘಟನೆ ನಡೆದು 5 ದಿನಗಳು ಕಳೆದಿದ್ದರು ಈವರೆಗೂ ಆರೋಪಿಗಳ ಬಂಧನ ಸಾಧ್ಯವಾಗಿಲ್ಲದಿರುವುದು ಪಶ್ಚಿಮ ಬಂಗಾಳದಾದ್ಯಂತ ತೀವ್ರ ಅಸಮಾಧಾನ್ನುಂಟು ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com