ಭೂ ಮಸೂದೆ ಸುಗ್ರೀವಾಜ್ಞೆ: ಅಣ್ಣಾ ಹಜಾರೆ ಪ್ರತಿಭಟನೆಗೆ ಕೈಜೋಡಿಸಿದ ಡಿಎಂಕೆ

ವಿವಾದಾತ್ಮಕ ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಡಿಎಂಕೆ ಪಕ್ಷ, ಅಣ್ಣಾ ಅವರ ಹೋರಾಟದಲ್ಲಿ ತಾನೂ ಕೂಡ ಭಾಗಿಯಾಗುವುದಾಗಿ ಹೇಳಿದೆ ಎಂದು ಮೂಲಗಳಿಂದ ತಿಳಿದುಬಂದಿದೆ...
ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ
ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ

ಚೆನ್ನೈ: ವಿವಾದಾತ್ಮಕ ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಡಿಎಂಕೆ ಪಕ್ಷ, ಅಣ್ಣಾ ಅವರ ಹೋರಾಟದಲ್ಲಿ ತಾನೂ ಕೂಡ ಭಾಗಿಯಾಗುವುದಾಗಿ ಹೇಳಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಭೂ ಮಸೂದೆ ಕಾಯ್ದೆ ತಿದ್ದುಪಡಿ ವಿರೋಧಿಸಿ ತಮಿಳುನಾಡಿನಾದ್ಯಂತ ರ್ಯಾಲಿ ಕೈಗೊಂಡಿದ್ದ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರು, ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತಂತೆ ಅಣ್ಣಾ ಹಜಾರೆ ಬರೆದಿರುವ ಪತ್ರದಲ್ಲಿ ಹಲವಾರು ಸತ್ಯಾಂಶಗಳಿದ್ದು, ರೈತರಿಗೆ ನ್ಯಾಯ ಒದಗಿಸುವ ಸಲುವಾಗಿ ಕಾಯ್ದೆ ವಿರೋಧಿಸಿ ತಾವೂ ಹಾಗೂ ತಮ್ಮ ಪಕ್ಷವೂ ಪ್ರತಿಭಟನೆಯಲ್ಲಿ ಕೈಜೋಡಿಸುತ್ತದೆ ಎಂದು ಹೇಳುವ ಮೂಲಕ ಅಣ್ಣಾ ಹಜಾರೆ ಅವರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಪತ್ರದಲ್ಲಿ ಅಣ್ಣಾ ಹಜಾರೆ ಅವರು 6 ಪ್ರಮುಖ ಅಂಶಗಳನ್ನು ಹೇಳಿದ್ದಾರೆ. ತಿದ್ದುಪಡಿಯಾಗಿರುವ ಕಾಯ್ದೆಯಲ್ಲಿ ಇದು ಬಹಳ ಮುಖ್ಯವಾದ ಅಂಶ. ಈ ಕುರಿತಂತೆ ಎಲ್ಲಾ ಪಕ್ಷಗಳು ಒಂದಾಗಿ ಹೋರಾಟ ನಡೆಸಬೇಕು. ಕಾಯ್ದೆ ವಿರೋಧಿಸಿ ಮುಂದಿನಗಳಲ್ಲಿ ನಮ್ಮ ಪಕ್ಷವೂ ದೇಶದಾದ್ಯಂತ ಹೋರಾಟ ನಡೆಸಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com