ಚರ್ಚ್ ದಾಳಿ: ದಾಳಿಕೋರರನ್ನು ಬಂಧಿಸದಿದ್ದರೆ ಶಾಲೆಗಳನ್ನು ತೆರೆಯಬೇಡಿ ಕ್ರೈಸ್ತರಿಂದ ಬೆದರಿಕೆ

ಮಧ್ಯಪ್ರದೇಶ ಜಬಲ್ ಪುರ ಚರ್ಚ್ ಮೇಲೆ ಕಲ್ಲು ತೂರಾಟ ಪ್ರಕರಣವನ್ನು ತೀವ್ರವಾಗಿ ವಿರೋಧಿಸಿರುವ ಸ್ಥಳೀಯ ಕ್ರಿಶ್ಚಿಯನ್ನರು ಪ್ರಕರಣ...
ಚರ್ಚ್ ಮೇಲೆ ದಾಳಿ, ದಾಳಿಕೋರರನ್ನು ಹುಡುಕದಿದ್ದರೆ ಶಾಲೆಗಳನ್ನು ತೆರೆಯಬೇಡಿ ಕ್ರೈಸ್ತರಿಂದ ಬೆದರಿಕೆ
ಚರ್ಚ್ ಮೇಲೆ ದಾಳಿ, ದಾಳಿಕೋರರನ್ನು ಹುಡುಕದಿದ್ದರೆ ಶಾಲೆಗಳನ್ನು ತೆರೆಯಬೇಡಿ ಕ್ರೈಸ್ತರಿಂದ ಬೆದರಿಕೆ

ಭೂಪಾಲ್: ಮಧ್ಯಪ್ರದೇಶ ಜಬಲ್ ಪುರ ಚರ್ಚ್ ಮೇಲೆ ಕಲ್ಲು ತೂರಾಟ ಪ್ರಕರಣವನ್ನು ತೀವ್ರವಾಗಿ ವಿರೋಧಿಸಿರುವ ಸ್ಥಳೀಯ ಕ್ರಿಶ್ಚಿಯನ್ನರು ಪ್ರಕರಣ ಸಂಬಂಧ ದಾಳಿಕೋರರನ್ನು ಬಂಧಿಸಿ, ಕ್ರಮ ಕೈಗೊಳ್ಳದಿದ್ದರೆ ಸ್ಥಳೀಯ ಶಾಲಾ ಕಾಲೇಜುಗಳನ್ನು ತೆರೆಯಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆ ಚರ್ಚ್ ನಲ್ಲಿ ಸುಮಾರು 200 ಹೆಚ್ಚು ಕ್ರೈಸ್ತರು ಹಾಜರಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸ್ಥಳಕ್ಕಾಗಮಿಸಿದ ಅನಾಮಿಕ ವ್ಯಕ್ತಿಗಳು ಚರ್ಚ್ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಘಟನೆಗೆ ಜಿಲ್ಲಾಯಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿತ್ತಲ್ಲದೇ, ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಅಲ್ಲಿನ ಸ್ಥಳೀಯರು ಪಟ್ಟು ಹಿಡಿದಿದ್ದರು.

ಚರ್ಚ್ ನಲ್ಲಿ ಧಾರ್ಮಿಕ ಮತಾಂತರ ಕಾರ್ಯಕ್ರಮ ನಡೆಯುತ್ತಿದ್ದರಿಂದ ಇದನ್ನು ವಿರೋಧಿಸಿ ಕಲ್ಲು ತೂರಾಟ ನಡೆದಿರಬಹುದು, ಮತಾಂತರ ನಡೆಯದಿದ್ದರೆ ಆ ಸ್ಥಳದಲ್ಲಿ ಅಷ್ಟು ಮಂದಿ ಸೇರಲು ಸಾಧ್ಯವಿರಲಿಲ್ಲ ಎಂದು ಹಿಂದೂ ಧರ್ಮ ಸೇನೆಯ ಸದಸ್ಯ ಯೋಗೇಶ್ ಹೇಳಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ಸ್ಥಳೀಯ ಪೊಲೀಸರು ಅನಾಮಿಕ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಘಟನೆ ನಡೆದು ಹಲವು ದಿನಗಳು ಕಳೆದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳದಿರುವುದರ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕ್ರೈಸ್ತರು ದಾಳಿಕೋರರನ್ನು ಬಂಧಿಸಿ, ಕ್ರಮ ಕೈಗೊಳ್ಳುವವರೆಗೂ ಸ್ಥಳೀಯ ಶಾಲಾ ಮತ್ತು ಕಾಲೇಜುಗಳನ್ನು ಮುಚ್ಚುವಂತೆ ಆಗ್ರಹಿಸಿದ್ದಾರೆ.

ಕೆಲವು ಹಿಂದೂ ಧರ್ಮದ ಜನರು ಮತಾಂತರಗೊಳ್ಳಬೇಕೆಂದು ಚರ್ಚ್ ಗೆ ಬಂದಿದ್ದರು. ಹಾಗಾಗಿಯೇ ಅವರನ್ನು ಧರ್ಮ ಪರಿವರ್ತನೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸತೀಶ್ ಎಂಬುವವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com