ಪಾಕ್ ವಿರುದ್ಧ ಗುಡುಗಿದ ಜಮ್ಮು ಸಿಎಂ ಮುಫ್ತಿ

ಶಾಂತಿ ಮತ್ತು ಸಮನ್ವಯ ಸಾಧಿಸಬೇಕಾದರೆ ಪಾಕಿಸ್ತಾನ ಭಯೋತ್ಪಾದನೆಯನ್ನು ನಿಗ್ರಹಿಸಬೇಕು. ಇಲ್ಲದಿದ್ದರೆ ತಕ್ಕ ಉತ್ತರ ನೀಡಬೇಕಾಗುತ್ತದೆ...
ಮುಫ್ತಿ ಮೊಹಮ್ಮದ್ ಸಯೀದ್
ಮುಫ್ತಿ ಮೊಹಮ್ಮದ್ ಸಯೀದ್

ಜಮ್ಮು: ಶಾಂತಿ ಮತ್ತು ಸಮನ್ವಯ ಸಾಧಿಸಬೇಕಾದರೆ ಪಾಕಿಸ್ತಾನ ಭಯೋತ್ಪಾದನೆಯನ್ನು ನಿಗ್ರಹಿಸಬೇಕು. ಇಲ್ಲದಿದ್ದರೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮುಪ್ತಿ ಮೊಹಮ್ಮದ್ ಸಯೀದ್ ಅವರು ಭಾನುವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಖತ್ವಾ ಮತ್ತು ಸಾಂಬಾದಲ್ಲಿ ನಡೆದ ಭಯೋತ್ಪಾದಕ ದಾಳಿ ಪಿತ್ತೂರಿಯಾಗಿದ್ದು, ಶಾಂತಿ ಕದಡುವ ಉದ್ದೇಶ ಇದಾಗಿದೆ ಎಂದು ಪಾಕಿಸ್ತಾನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಜನತೆ ಹೆಚ್ಚು ಸದೃಡರಾಗಿದ್ದು ಅವರನ್ನು ಭಯೋತ್ಪಾದಕ ದಾಳಿಯಿಂದ ಹೊಡೆಯಲು ಸಾಧ್ಯವಿಲ್ಲ ಎಂದರು.

ಪಾಕ್ ಉಗ್ರರ ಈ ನಡೆಯನ್ನು ವಿರೋಧಿಸುತ್ತಿದ್ದು ಜಮ್ಮು ಕಾಶ್ಮೀರದಲ್ಲಿ ಹಿಂಸಾ ಕೃತ್ಯ ನಡೆಸಿದರೆ ಸುಮ್ಮನಿರುವುದಿಲ್ಲ. ಅಲ್ಲದೆ ಪಾಕ್ ಉಗ್ರರಿಗೆ ಪ್ರಚೋದನೆ ನೀಡುತ್ತಿದ್ದು ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಖಡಕ್ ಉತ್ತರ ರವಾನಿಸಿದ್ದಾರೆ.

ಮುಫ್ತಿ ಅಧಿಕಾರಕ್ಕೆ ಬಂದಾಗಿನಿಂದ ಪಾಕ್ ಹಾಗೂ ಭಯೋತ್ಪಾದಕ ಪರವಾಗಿ ಮಾತನಾಡುತ್ತಿದ್ದು, ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಪಾಕ್ ವಿರುದ್ಧ ಗುಡುಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com