ರಾಜೆಂದ್ರ ಸಿಂಗ್‍ಗೆ ನೀರಿನ ನೊಬೆಲ್

ಆಧುನಿಕ ಭಾರತದ ಭಗೀರಥನೆಂದೇ ಖ್ಯಾತ ರಾಜಸ್ಥಾನದ ರಾಜೇಂದ್ರ ಸಿಂಗ್‍ಗೆ 2015ರ ಸ್ಟಾಕ್‍ಹೊಮ್ ಪ್ರಶಸ್ತಿ ಸಂದಿದೆ...
ರಾಜೆಂದ್ರ ಸಿಂಗ್‍
ರಾಜೆಂದ್ರ ಸಿಂಗ್‍

ನವದೆಹಲಿ: ಆಧುನಿಕ ಭಾರತದ ಭಗೀರಥನೆಂದೇ ಖ್ಯಾತ ರಾಜಸ್ಥಾನದ ರಾಜೇಂದ್ರ ಸಿಂಗ್‍ಗೆ 2015ರ ಸ್ಟಾಕ್‍ಹೊಮ್ ಪ್ರಶಸ್ತಿ ಸಂದಿದೆ.

`ವಾಟರ್ ನೊಬೆಲ್' ಎಂದೇ ಪರಿಗಣಿತವಾದ ಈ ಪ್ರಶಸ್ತಿಯನ್ನು ಜಲ ಸಂರಕ್ಷಣೆ, ನೀರಿನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೆ ಕೊಡಲಾಗುತ್ತದೆ. ಈ ಬಾರಿಯ ಪ್ರಶಸ್ತಿ ರಾಜೇಂದ್ರ ಸಿಂಗ್‍ಗೆ ಲಭಿಸಿರುವುದು ಭಾರತಕ್ಕೆ ಅಕ್ಷರಶಃ ಹೆಮ್ಮೆ ತಂದಿದೆ.

ರಾಜಸ್ಥಾನದ ಐದು ನದಿಗಳನ್ನು ಪುನಶ್ಚೇತನಗೊಳಿಸಿದ ರಾಜೇಂದ್ರ ಸಿಂಗ್, ಹತ್ತಾರು ವರ್ಷಗಳಿಂದ ನೀರಿನ ವಿಚಾರದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿದ್ದಾರೆ. ಆಗಸ್ಟ್ 26ರಂದು ಸ್ವೀಡನ್‍ನಲ್ಲಿ ನಡೆಯುವ ರಾಯಲ್ ಅವಾರ್ಡ್ ಸೆರಮನಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗು ವುದು.

ವಿಶ್ವ ಜಲದಿನವಾದ ಮಾ.22 ರಂದು ಪ್ರಶಸ್ತಿ ಘೋಷಿಸಲಾಗಿದೆ. ಯಾರಿವರು?: ಸಿಂಗ್ ಆಯು ರ್ವೇದದಲ್ಲಿ ಪದವಿ ಮುಗಿಸಿದ್ದರೂ, ತಾವು ಓದಿರುವ ವಿಷಯ ಬಿಟ್ಟು ಇನ್ನೊಂದು ವಿಷಯದ ಬಗ್ಗೆ ಅಧ್ಯಯನ ನಡೆಸಿ, ತರುಣ್ ಭಾರತ್ ಸಂಘ ಕಟ್ಟಿ ಜನರಿಗೆ ನೀರು ಸಿಗುವಂತೆ ಮಾಡಿದರು.

ಇದರ ಪರಿಣಾಮ ಇಂದು ರಾಜಸ್ಥಾನದ ಜನತೆಗೆ ನೀರಿನ ಕೊರತೆ ಬಹುತೇಕ ನಿವಾರಣೆಯಾಗಿದೆ. ಅವರ ಈ ಸೇವೆ ಯಿಂದ ಪ್ರಭಾವಿತರಾದ `ಸ್ಟಾಕ್ ಹೊಮ್ಇಂಟರ್ ನ್ಯಾಷನಲ್ ವಾಟರ್ ಇನ್ಸಿಟಿಟ್ಯೂಟ್' (ಸಿವಿ) ನಿರ್ದೇಶಕ ಟಾಗ್ನಿ ಹೊಮ್ ಗ್ರೆನ್, `ಸಿಂಗ್ ನಿಜಕ್ಕೂ ಹಳ್ಳಿಯ ಜನತೆಯ ಜೀವನವನ್ನೇ ಬದಲಾಯಿಸಿದ್ದಾರೆ.

ನಾವೇನಾದರೂ ಜಲ ಸಂರಕ್ಷಣೆಯ ಕ್ಷೇತ್ರದಲ್ಲಿ ಸಾಧನೆ ಮಾಡುವುದಾದರೆ, ಸಿಂಗ್ ನಮಗೆಲ್ಲ ಪಾಠವಾಗುತ್ತಾರೆ. ಅವರ ನಡೆಗಳು ನಮಗೆಲ್ಲ ಆದರ್ಶವಾಗಬಹುದು' ಎಂದು ಬಣ್ಣಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com