ನಿರ್ಭಯಾ ಸಾಕ್ಷ್ಯ ಚಿತ್ರ: ಇಬ್ಬರು ವಕೀಲರಿಗೆ ವಿವರಣೆ ಕೇಳಿ ಸುಪ್ರೀಂ ನೋಟಿಸ್

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಸಿ ನಿರ್ಮಿಸಿದ್ದ ವಿವಾದಾತ್ಮಕ ಸಾಕ್ಷ್ಯ ಚಿತ್ರ 'ಇಂಡಿಯಾಸ್ ಡಾಟರ್‌'ನಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಇಬ್ಬರು ವಕೀಲರಿಗೆ ಮಂಗಳವಾರ ಸುಪ್ರೀಂ ಕೋರ್ಟ್ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ.

ವಕೀಲರ ಹೇಳಿಕೆ ವಿರುದ್ಧ ಸುಪ್ರೀಂಕೋರ್ಟ್ ನ ಮಹಿಳಾ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ  ವಿಚಾರಣೆ ನಡೆಸಿದ ಕೋರ್ಟ್, ಮಹಿಳೆಯರ ವಿರುದ್ಧದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದ್ದು, ಆ ನಿಟ್ಟಿನಲ್ಲಿ ವಕೀಲರಾದ ಎಂಎಲ್ ಶರ್ಮಾ ಮತ್ತು ಎ.ಪಿ.ಸಿಂಗ್ ಅವರು ತಮ್ಮ ಹೇಳಿಕೆ ಕುರಿತು ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ನ್ಯಾಯಮೂರ್ತಿ ವಿ.ಗೋಪಾಲ್ ಅವರು ಸೂಚಿಸಿದ್ದಾರೆ.

ಈ ಇಬ್ಬರು ವಕೀಲರು ವಿವಾದಾತ್ಮಕ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ್ದು, ಇವರಿಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಾಕ್ಟೀಸ್ ಮಾಡಲು ಅನುವು ಮಾಡಿಕೊಡಬಾರದೆಂದು ಸಂಘ ಮನವಿಯಲ್ಲಿ ಕೋರಿತ್ತು.

ಶರ್ಮಾ ಅವರು ವಿವಾದಾತ್ಮಕ ಸಾಕ್ಷ್ಯ ಚಿತ್ರದಲ್ಲಿ, ಯುವತಿಯರು ಸರಿಯಾದ ರಕ್ಷಣೆಯಿಲ್ಲದೆ ಹೊರಗಡೆ ಹೋದಾಗ ಅತ್ಯಾಚಾರದಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com