ಮಾಹಿತಿ ತಂತ್ರಜ್ಞಾನ ಕಾಯ್ದೆ: ಇಂದು ಸುಪ್ರೀಂ ತೀರ್ಪು

ಸಾಮಾಜಿಕ ಜಾಲತಾಣಗಳಲ್ಲಿ ಕಿರಿಕಿರಿ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಬಿತ್ತರಿಸುವವರನ್ನು ಬಂಧಿಸಲು ಆಸ್ಪದ ನೀಡುವ ಮಾಹಿತಿ ತಂತ್ರಜ್ಞಾನ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಕಿರಿಕಿರಿ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ಬಿತ್ತರಿಸುವವರನ್ನು ಬಂಧಿಸಲು ಆಸ್ಪದ ನೀಡುವ ಮಾಹಿತಿ ತಂತ್ರಜ್ಞಾನ ಕಾಯ್ದೆ(ಐಟಿ ಕಾಯ್ದೆ) ಪ್ರಶ್ನಿಸಿ ಹೂಡಲಾಗಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್‌ ಇಂದು ಮಹತ್ತರ ತೀರ್ಪು ಪ್ರಕಟಿಸಲಿದೆ.

ನ್ಯಾಯಾಧೀಶರಾದ ಜೆ. ಚೆಲಮೇಶ್ವರ್‌ ಮತ್ತು ಆರ್‌.ಎಫ್‌. ನಾರಿಮನ್‌ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಮಂಗಳವಾರ ತೀರ್ಪು ಪ್ರಕಟಿಸಲಿದೆ.

ಈ ಕಾಯ್ದೆಯಡಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಬಿತ್ತರಿಸುವವರನ್ನು ಬಂಧಿಸುವ ಅವಕಾಶವೂ ಇದೆ.ಹೀಗಾಗಿ ಈ ಕಾಯ್ದೆಯು ಅಂತರ್ಜಾಲ ಬಳಕೆದಾರರ ಸ್ವಾತಂತ್ರ್ಯವನ್ನು ಹತ್ತಿಕ್ಕಲಿದೆ ಎಂದು ಆರೋಪಿಸಿ ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೂ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದವು.

ಮುಂಬೈ ಮೇಲೆ ಮುಂಬೈ ಮೇಲೆ ನಡೆದ 26/11ರ ಭಯೋತ್ಪಾದಕ ದಾಳಿಯ ನಂತರ ಐಟಿ ಕಾಯ್ದೆಯನ್ನು ಆತುರವಾಗಿ ತಿದ್ದುಪಡಿ ಮಾಡಲಾಗಿತ್ತು. 2008ರ ಡಿಸೆಂಬರ್ 22ರಂದು ಇದನ್ನು ಲೋಕಸಭೆ ಅಂಗೀಕರಿಸಿತ್ತು.

ಐಟಿ ಕಾಯ್ದೆ ‘ಸೆಕ್ಷನ್ 66ಎ’ ಸೇರಿದಂತೆ ವಿವಿಧ ಸೆಕ್ಸನ್‌ಗಳ ಸಂವಿಧಾನಿಕ ಮೌಲ್ಯವನ್ನು ಪ್ರಶ್ನಿಸಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಐಟಿ ಕಾಯ್ದೆಯ ಸೆಕ್ಷನ್‌ 66 ‘ಎ’ ಸಂವಿಧಾನದತ್ತ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿತ್ತು. ಇದರ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಇಂದು ತೀರ್ಪು ಪ್ರಕಟಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com