ಓಲಾ, ಉಬರ್ ಆ್ಯಪ್ ಗೆ ನಿಷೇಧ ಹೇರಿ: ದೆಹಲಿ ಸರ್ಕಾರ

ಉಬರ್ ಕ್ಯಾಬ್ ಹಾಗೂ ಓಲಾ ಟ್ಯಾಕ್ಸಿಗಳ ಕುರಿತಂತೆ ಇರುವ ಮೊಬೈಲ್ ಅಪ್ಲಿಕೇಶನ್ ಗಳನ್ನು ನಿಷೇಧಿಸುವಂತೆ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯಕ್ಕೆ ದೆಹಲಿ ಸರ್ಕಾರ ಪತ್ರ ಬರೆದಿದೆ...
ಉಬರ್ ಕ್ಯಾಬ್ ಮೊಬೈಲ್ ಅಪ್ಲಿಕೇಶನ್ ಗೆ ನಿಷೇಧ
ಉಬರ್ ಕ್ಯಾಬ್ ಮೊಬೈಲ್ ಅಪ್ಲಿಕೇಶನ್ ಗೆ ನಿಷೇಧ

ನವದೆಹಲಿ: ಉಬರ್ ಕ್ಯಾಬ್ ಹಾಗೂ ಓಲಾ ಟ್ಯಾಕ್ಸಿಗಳ ಕುರಿತಂತೆ ಇರುವ ಮೊಬೈಲ್ ಅಪ್ಲಿಕೇಶನ್ ಗಳನ್ನು ನಿಷೇಧಿಸುವಂತೆ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯಕ್ಕೆ ದೆಹಲಿ ಸರ್ಕಾರ ಪತ್ರ ಬರೆದಿದೆ.

ದೆಹಲಿಯಲ್ಲಿ ಉಬರ್ ಕ್ಯಾಬ್ ಗೆ ಸೇರಿದ ಚಾಲಕನೊಬ್ಬ 25 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಘಟನೆಯ ಪರಿಣಾಮ ಉಬರ್ ಕ್ಯಾಬ್ ಮತ್ತು ಇದೇ ಸಂಸ್ಥೆಗೆ ಸೇರಿದ ಮತ್ತೊಂದು ಕ್ಯಾಬ್ ಸರ್ವಿಸ್ ಸಂಸ್ಥೆ ಓಲಾ ಮೊಬೈಲ್ ಅಪ್ಲಿಕೇಶನ್ ಗಳನ್ನು ಬ್ಲಾಕ್ ಮಾಡುವಂತೆ ದೆಹಲಿ ಸರ್ಕಾರ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ ಪತ್ರ ಬರೆದಿದೆ.

ರಾಜ್ಯದಾದ್ಯಂತ ಉಬರ್ ಟ್ಯಾಕ್ಸಿ ಸರ್ವಿಸ್ ಗಳಿಗೆ ನಿಷೇಧ ಹೇರಿದ್ದರೂ ಯಾವುದೇ ಭಯವಿಲ್ಲದೆ ರಾಜ್ಯದಲ್ಲಿ ಉಬರ್ ತನ್ನ ಕಾರ್ಯ ನಿರ್ವಹಿಸುತ್ತಿದೆ. ಹಾಗಾಗಿ ಉಬರ್ ಹಾಗೂ ಓಲಾ ಟ್ಯಾಕ್ಸಿಗಳ ಮೊಬೈಲ್ ಅಪ್ಲಿಕೇಶನ್ ನ ಐಪಿ ವಿಳಾಸವನ್ನೇ ರದ್ದುಗೊಳಿಸುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರ ಉಬರ್ ಟ್ಯಾಕ್ಸಿ ಸಂಸ್ಥೆಯ ವಿರುದ್ದವಾಗಿಲ್ಲ, ಆದರೆ ಸಾರ್ವಜನಿಕರ ಹಿತಸಂರಕ್ಷಣೆಗಾಗಿ ವಾಹನ ಚಾಲಕರ ವಿಳಾಸ, ದೂರವಾಣಿ ಸಂಖ್ಯೆ, ಗುರುತು ಪ್ರಮಾಣ ಪತ್ರ, ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್, ಇಮೇಲ್ ವಿಳಾಸ, ಹಾಗೂ ಇನ್ನಿತರೆ ಪ್ರಮಾಣ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಿ ಸರ್ಕಾರ ಹೇರಿರುವ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಇದಾವುದೇ ನಿಯಮಗಳನ್ನು ಪಾಲಿಸದೆ ಉಬರ್ ಟ್ಯಾಕ್ಸಿ ಸಂಸ್ಶೆ ತನ್ನ ಕಾರ್ಯಚಟುವಟಿಕೆಗಳನ್ನು ಎಂದಿನಂತೆ ಮುಂದುವರೆಸುತ್ತಿದೆ. ಇದಲ್ಲದೇ ಲೈಸನ್ಸ್ ಹೊಂದಿರದ ವೆಬ್ ಆಧರಿತ ಟ್ಯಾಕ್ಸಿಗಳು ರಾಜ್ಯದಲ್ಲಿ ಹೆಚ್ಚಾಗಿದ್ದು, ಅವುಗಳ ಸೇವೆಗಳನ್ನು ನಿರ್ಬಂಧಿಸುವಂತೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ  ಪತ್ರ ಬರೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com