ಕುಂಜುನ್ನಾಮ್,
ದೇಶ
ಭಾರತದ ಶತಾಯುಷಿ, ಲಿಮ್ಕಾ ರೆಕಾರ್ಡ್ ಖ್ಯಾತಿಯ ಕುಂಜುನ್ನಾಮ್ ವಿಧಿವಶ
ದೇಶದ ಹಿರಿ ಜೀವ ಶತಮಾನಗಳ ಕಾಲ ಬದುಕಿ ಬಾಳಿದ ಕೇರಳದ ಕುಂಜುನ್ನಾಮ್ ಎಂಬುವರು ತಮ್ಮ 112ರ ಹರೆಯದಲ್ಲಿ ಇಹ ಲೋಕ ತ್ಯಜಿಸಿದ್ದಾರೆ.
ತ್ರಿಶೂರ್(ಕೇರಳ): ದೇಶದ ಹಿರಿ ಜೀವ ಶತಮಾನಗಳ ಕಾಲ ಬದುಕಿ ಬಾಳಿದ ಕೇರಳದ ಕುಂಜುನ್ನಾಮ್ ಎಂಬುವರು ತಮ್ಮ 112ರ ಹರೆಯದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದೇಶದ ಹಿರಿಯ ಮಹಿಳೆ ಎಂಬ ಖ್ಯಾತಿಗೆ 2014ರಲ್ಲಿ ಭಾಜನರಾಗಿದ್ದರು. ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳವಾರ ಅಮಲ ಮೆಡಿಕಲ್ ಕಾಲೇಜ್ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತೀವ್ರವಾಗಿ ಅಸ್ಪಸ್ಥರಾಗಿದ್ದ ಕುಂಜುನ್ನಾಮ್ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಸ್ಪಂಧಿಸದ ಅವರು ನಿನ್ನೆ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಮೇ 20 ರಂದು ಜನಿಸಿದ್ದ ಕುಂಜುನ್ನಾಮ್ ಅವರ 113ನೇ ಜನ್ಮದಿನವನ್ನು ವಿಶೇಷವಾಗಿ ಆಚರಿಸಬೇಕು ಎಂದ ಯೋಜನಗಳನ್ನು ಅವರ ಬಂಧುಗಳು ಹಾಕಿಕೊಂಡಿದ್ದರು. ಆದರೆ ವಿಧಿ ಲಿಖಿತ ಬೇರೆಯೆ ಇತ್ತು. ಮೃತ ಕುಂಜುನ್ನಾಮ್ ಅವರ ಅಂತ್ಯ ಸಂಸ್ಕಾರ ಇಂದು ನಡೆಯಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ