
ಕ್ಯಾಲಿಫೋರ್ನಿಯಾ: ತಮ್ಮ 'ಚಿಕಿತ್ಸೆ ಸುವಾರ್ತೆ'ಗಳಿಂದ ಎಂತಹ ಕಾಯಿಲೆಯನ್ನೂ ಗುಣಪಡಿಸುವ ವ್ಯಕ್ತಿಗೇ ಅನಾರೋಗ್ಯ! ತಮ್ಮ ಸ್ಪರ್ಶ ಮಾತ್ರದಿಂದ ಜಗತ್ತಿನ ಲಕ್ಷಾಂತರ ಜನರನ್ನು ಗುಣಪಡಿಸಿರುವುದಾಗಿ ಹೇಳಿಕೊಳ್ಳುವ ಬೆನ್ನಿ ಹಿನ್ ಅವರೇ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಳೆದ ವಾರ ಬ್ರೆಜಿಲ್‍ನಲ್ಲಿ ಲಕ್ಷಕ್ಕೂ ಅಧಿಕ ಜನರಿದ್ದ `ಸುವಾರ್ತೆ ಕೂಟ' ಉದ್ದೇಶಿಸಿ ಮಾತನಾಡಿದ್ದ ಬೆನ್ನಿ ಹಿನ್, ತಮ್ಮ ಸಹೋದರಿಯ ಮನೆಯಲ್ಲಿ ತಂಗಿದ್ದಾಗ ಅಸ್ವಸ್ಥರಾದರು. ಅಲ್ಲಿಂದ ಕ್ಯಾಲಿಫೋರ್ನಿಯಾಕ್ಕೆ ಕರೆತಂದು ಆರೇಂಜ್ ಕೌಂಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಹಿನ್, ಈ ವಾರಾಂತ್ಯದವರೆಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ.
ಇತರರನ್ನು ಗುಣಪಡಿಸುವ ವ್ಯಕ್ತಿಗೇ ಹೀಗಾದರೆ ಜನ ಅವರನ್ನು ನಂಬುವರೆ? ಆಸ್ಪತ್ರೆಗೆ ದಾಖಲಾಗುವ ಬದಲು ತಮ್ಮನ್ನು ತಾವು ಗುಣಪಡಿಸಿಕೊಳ್ಳಲು ಸಾಧ್ಯವಿರಲಿಲ್ಲವೆ? ಇದಕ್ಕೆ ಬೆನ್ನಿ ಹಿನ್ ಹೇಳುವುದಿಷ್ಟು-`ಎಲ್ಲ ಪ್ರಶ್ನೆಗಳಿಗೂ ನಮ್ಮಲ್ಲಿ ಉತ್ತರ ಇರುವುದಿಲ್ಲ. ವಯಸ್ಸಾಗುತ್ತಿದ್ದಂತೆ ಶರೀರ ಘಾಸಿಗೊಳ್ಳುತ್ತದೆ. ಅದನ್ನು ಸರಿಪಡಿಸುವ ಅಗತ್ಯವಿರುತ್ತದೆ'.
Advertisement