ವಾದ್ರಾ ಭೂ ಅಕ್ರಮ ನಿಜ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಹರ್ಯಾಣ ಸರ್ಕಾರ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವುದನ್ನು ಮಹಾಲೇಖಪಾಲರು ದೃಢಪಡಿಸಿದ್ದಾರೆ.
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ

ಚಂಡೀಗಡ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಹರ್ಯಾಣ ಸರ್ಕಾರ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವುದನ್ನು ಮಹಾಲೇಖಪಾಲರು ದೃಢಪಡಿಸಿದ್ದಾರೆ.

ಹರ್ಯಾಣದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ವಾದ್ರಾ ಸೇರಿದಂತೆ ಹಲವು ಬಿಲ್ಡರ್ಗಳಿಗೆ ನಿಯಮ ಉಲ್ಲಂಘಿಸಿ ಭೂಮಿ ಮಂಜೂರು ಮಾಡಲಾಗಿದೆ ಎಂದು 2013-14ನೇ ಸಾಲಿನ ಸಿಎಜಿ ವರದಿ ಹೇಳಿದೆ. ವರದಿಯನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಗಿದೆ.

ನಗರ ಮತ್ತು ಯೋಜನಾ ಇಲಾಖೆಯನ್ನು ತೀವ್ರವಾಗಿ ತರಾಟೆ ತೆಗೆದು ಕೊಂಡಿರುವ ವರದಿ, ಭೂಮಿ ಹಂಚಿಕೆಗೆ ತಾತ್ವಿಕ ಒಪ್ಪಿಗೆ ನೀಡುವ ಸಂದರ್ಭದಲ್ಲಿಯಾಗಲೀ, ಹಸ್ತಾಂತರ ಸಂದರ್ಭದಲ್ಲಿಯಾಗಲೀ ನಿಯಮಗಳನ್ನು ಪಾಲಿಸುವ ಗೋಜಿಗೇ ಹೋಗಿಲ್ಲ. ಇದರಿಂದ ಬಿಲ್ಡರ್ ಗಳಿಗೆ ಭಾರಿ ಲಾಭವಾಗಿದೆ ಎಂದು ಹೇಳಿದೆ. ವಾದ್ರಾ ಸೇರಿದಂತೆ ವ್ಯಕ್ತಿಗತವಾಗಿ ಯಾರ ಹೆಸರನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಆದರೆ ಸಂಸ್ಥೆಗಳ ಹೆಸರು ಉಲ್ಲೇಖಿಸಲಾಗಿದೆ.

ಅಕ್ರಮವಾಗಿ ಭೂಮಿ ಪಡೆದ ಸಂಸ್ಥೆಗಳ ಪೈಕಿ ವಾದ್ರಾ ಒಡೆತನದ ಸ್ಕೈಲೈಟ್ ಹಾಸ್ಪಿಟಾಲಿಟಿ, ಅದರ ಸಹವರ್ತಿ ಸಂಸ್ಥೆ ಡಿಎಲ್‍ಎಲ್ ಸಹ ಇದೆ. ಶೈಖುಪುರ ಗ್ರಾಮ ಮತ್ತು ಗುರಗಾಂವ್ ಗಳಲ್ಲಿ ಸುಮಾರು 2,500 ಎಕರೆ ಅಕ್ರಮ ಭೂ ಹಂಚಿಕೆಯಲ್ಲಿ ಸಿಂಹಪಾಲು ಇವೆರಡು ಸಂಸ್ಥೆಗಳದ್ದೇ ಇದೆ. ಹೀಗಾಗಿ ವಾದ್ರಾಗಾಗಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅನುಮಾನವನ್ನು ಸಿಎಜಿ ದೃಢಪಡಿಸಿದೆ.

ಸ್ಕೈಲೈಟ್ ಭೂ ಅವ್ಯವಹಾರದ ಕುರಿತು ಖೇಮ್ಕಾ ತನಿಖಾ ವರದಿ ಸಲ್ಲಿಸಿದ್ದರಲ್ಲದೆ, ಸ್ಕೈಲೈಟ್ ಭೂ ಹಂಚಿಕೆ ರದ್ದುಪಡಿಸಿದ್ದರು. ಆದರೆ ಆಗಿನ ಮುಖ್ಯಮಂತ್ರಿ ಭುಪಿಂದರ್ ಸಿಂಗ್ ಹೂಡಾ ಸ್ಕೈಲೈಟ್ ಸಂಸ್ಥೆಗೆ ಕ್ಲೀನ್‍ಚಿಟ್ ನೀಡಿ, ದಕ್ಷ ಅಧಿಕಾರಿಗೆ ವರ್ಗಾವಣೆ ಶಿಕ್ಷೆ ಕೊಟ್ಟಿದ್ದರು. ನಿಯಮ ಉಲ್ಲಂಘಿಸಿ ಭೂಮಿ ಪಡೆದದ್ದು, ನ್ಯಾಯಾಲಯದಲ್ಲಿ ಮಾಹಿತಿ ಮರೆಮಾಚಿದ್ದು, ಭೂಮಿ ಮರುಮಾರಾಟದ ನಿಬಂಧನೆಗಳ ಸಡಿಲಿಕೆ ಸೇರಿದಂತೆ ಸ್ಕೈಲೈಟ್‍ಗೆ ಸಂಬಂಧಿಸಿದ ಅವ್ಯವಹಾರಗಳನ್ನು ಸಿಎಜಿ ಎಳೆಎಳೆಯಾಗಿ ಬಿಡಿಸಿಟ್ಟಿದೆ.

ಸ್ಕೈಲೈಟ್ ಅಕ್ರಮವೇನು?
ರು. 50.50 ಕೋಟಿಗೆ ಜಾಗ ಖರೀದಿ,
ರು. 58 ಕೋಟಿಗೆ ಡಿಎಲ್‍ಎಫ್ ಗೆ ಮಾರಾಟ
 2008ರ ಜ.28ರಂದು ಖರೀದಿ,
ಸೆ.28ರಂದು ಮಾರಾಟ, ಡಿ.15ರಂದು
ಮಾರಾಟಕ್ಕೆ ಸರ್ಕಾರದ ಅನುಮತಿ!
ಸಂಪರ್ಕ ರಸ್ತೆ ಇತ್ಯಾದಿಗಳ ನೆಪದಲ್ಲಿ
ಸಂಸ್ಥೆಗೆ ನೀಡಿದ್ದಕ್ಕಿಂತ ಕಡಿಮೆ
ಜಾಗಕ್ಕೆ ಶುಲ್ಕ ವಸೂಲಿ
ಸ್ಕೈಲೈಟ್‍ನ ಸಹವರ್ತಿ ಸಂಸ್ಥೆ ಡಿಎಲ್ಎಫ್ ಗೆ ಭೂ ಮಂಜೂರು,
ಪರಸ್ಪರ ಮಾರಾಟ ಪ್ರಕ್ರಿಯೆಯಲ್ಲೂ ಅಕ್ರಮ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com