ಗುದ್ದೋಡು ಪ್ರಕರಣ: ಘಟನೆ ವೇಳೆ ನಾನು ಕಾರು ಚಾಲನೆ ಮಾಡುತ್ತಿರಲಿಲ್ಲ: ಸಲ್ಮಾನ್ ಖಾನ್

ಘಟನೆ ನಡೆಯುವ ವೇಳೆ ನಾನು ಚಾಲನೆ ಮಾಡುತ್ತಿರಲಿಲ್ಲ. ಕಾರನ್ನು ನನ್ನ ಡ್ರೈವರ್ ಚಾಲನೆ ಮಾಡುತ್ತಿದ್ದ, ಆದರೆ ಆತ ಮದ್ಯಪಾನ ಮಾಡಿರಲಿಲ್ಲ ಎಂದು ಗುದ್ದೋಡು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಶುಕ್ರವಾರ ಹೇಳಿದ್ದಾರೆ...
ಬಾಲಿವುಡ್ ನಟ ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್

ಮುಂಬೈ: ಘಟನೆ ನಡೆಯುವ ವೇಳೆ ನಾನು ಚಾಲನೆ ಮಾಡುತ್ತಿರಲಿಲ್ಲ. ಕಾರನ್ನು ನನ್ನ ಡ್ರೈವರ್ ಚಾಲನೆ ಮಾಡುತ್ತಿದ್ದ, ಆದರೆ ಆತ ಮದ್ಯಪಾನ ಮಾಡಿರಲಿಲ್ಲ ಎಂದು ಗುದ್ದೋಡು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಶುಕ್ರವಾರ ಹೇಳಿದ್ದಾರೆ.

ಸಲ್ಮಾನ್ ಖಾನ್ ಅವರ ಗುದ್ದೋಡು ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಚಾರಣೆಗಾಗಿ ಸಲ್ಮಾನ್ ಖಾನ್ ಅವರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿತ್ತು. ನ್ಯಾಯಾಲಯ ಆದೇಶದಂತೆ ಇಂದು ವಿಚಾರಣೆಗೆ ಹಾಜರಾದ ಸಲ್ಮಾನ್ ಖಾನ್ ಅವರು, ಘಟನೆ ನಡೆದ ಸಂದರ್ಭದಲ್ಲಿ ನಾನು ಕಾರು ಚಾಲನೆ ಮಾಡುತ್ತಿರಲಿಲ್ಲ. ನನ್ನ ಕಾರು ಚಾಲಕ ಕಾರು ಓಡಿಸುತ್ತಿದ್ದನು. ಘಟನೆ ನಡೆದ ನಂತರ ಕಾರು ಇಳಿದು ನೋಡಬೇಕು ಎನ್ನುವಾಗ, ನನ್ನ ಎಡ ಭಾಗದಲ್ಲಿದ್ದ ಕಾರಿನ ಬಾಗಿಲು ತೆಗೆಯಲು ಸಾಧ್ಯವಾಲಿಲ್ಲ. ಹಾಗಾಗಿ ಡ್ರೈವರ್ ಕುಳಿತಿದ್ದ ಬಲಭಾಗದ ಬಾಗಿಲಿನಿಂದ ಹೊರಬರಲು ಪ್ರಯತ್ನಿಸಿದ್ದೆ. ಈ ವೇಳೆ ಅಲ್ಲಿದ್ದವರು ನಾನೇ ಕಾರು ಚಾಲನೆ ಮಾಡುತ್ತಿದ್ದೆ ಎಂದು ಕೊಂಡಿದ್ದಾರೆ ಎಂದು ಸಲ್ಮಾನ್ ಹೇಳಿದ್ದಾರೆ.

ಇದೇ ವೇಳೆ ವಾಹನ ಭದ್ರತಾ ಸಿಬ್ಬಂದಿಗಳು ಸಲ್ಮಾನ್ ಖಾನ್ ಅವರಿಗೆ ಕಾರು ನೀಡಲಾಗಿತ್ತು. ಅವರೇ ಕಾರನ್ನು ಚಲಾಯಿಸುತ್ತಿದ್ದರು ಎಂದು ಹೇಳಿದಾಗ, ಇದಕ್ಕುತ್ತರಿಸಿದ ಸಲ್ಮಾನ್ ಭದ್ರತಾ ಸಿಬ್ಬಂದಿಗಳು ನನಗೆ ಕಾರನ್ನು ಕೊಟ್ಟಿದ್ದು ನಿಜ. ಈ ವೇಳೆ ನನ್ನ ಡ್ರೈವರ್ ಬಾರ್ ನಲ್ಲಿದ್ದ. ನಾನು ಕಾರು ತೆಗೆದುಕೊಂಡು ಬಂದ ನಂತರ ನನ್ನ ಡ್ರೈವರ್ ಕಾರು ಚಲಾಯಿಸುತ್ತಿದ್ದ, ಆದರೆ ಅವನು ಮದ್ಯಪಾನ ಮಾಡಿರಲಿಲ್ಲ. ನೀರನ್ನಷ್ಟೇ ಕುಡಿದಿದ್ದ ಎಂದು ಹೇಳಿದ್ದಾರೆ.

ಡ್ರೈವರ್ ಕಾರು ಚಲಾಯಿಸುವಾಗ ಇಡೀ ರಾತ್ರಿ ನಾನು ಕೂಡ ಎಚ್ಚರವಾಗಿಯೇ ಇದ್ದೆ. ಅಪಘಾತವಾದಾಗ ಜನರ ಕೋಪದಿಂದ ಪರಾಗುವ ಸಲುವಾಗ ಸ್ಥಳದಿಂದ ಓಡಿಹೋಗಲು ಯತ್ನಿಸಿದ್ದು ನಿಜ. ಆದರೆ ಈ ವೇಳೆ ಕಾರು ಚಾಲಕನಿಗೆ ಪೊಲೀಸರಿಗೆ ವಿಷಯ ತಿಳಿಸಲು ಹೇಳಿದ್ದೆ. ಘಟನೆ ನಡೆದು 15 ನಿಮಿಷಕ್ಕಿಂತ ಹೆಚ್ಚು ಸಮಯ ನಾನು ಸ್ಥಳದಲ್ಲಿಯೇ ಇದ್ದೆ ಎಂದ ಸಲ್ಮಾನ್ ವಿಚಾರಣೆ ವೇಳೆ ಪ್ರತಿವಾದಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

2002ರಲ್ಲಿ ಮುಂಬೈನ ಬಾಂದ್ರಾ ಪ್ರಾಂತ್ಯದಲ್ಲಿ  ಸಲ್ಮಾನ್ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಕುಡಿದ ಅಮಲಿನಲ್ಲಿದ್ದ ಸಲ್ಮಾನ್, ತಮ್ಮ ಕಾರನ್ನು ಫೂಟ್‌ಪಾತ್ ಮೇಲೆ ಹಾಯಿಸಿದ್ದರು. ಪರಿಣಾಮ ಕಾರು ಮಲಗಿದ್ದವರ ಮೇಲೆ ಹರಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು. ಅಲ್ಲದೆ  ನಾಲ್ವರು ಗಾಯಗೊಂಡಿದ್ದರು.
ಈ ಸಂಬಂಧ ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಅಲ್ಲದೆ ಕಳೆದ ಹಲವು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಅಪಘಾತಕ್ಕೆ ಸಲ್ಮಾನ್ ಅವರೇ ಕಾರಣರಾಗಿದ್ದು, ಅವರೇ ಕಾರನ್ನು ಚಲಾಯಿಸುತ್ತಿದ್ದರು. ಅಲ್ಲದೆ ಘಟನೆ ನಡೆಯುವುದಕ್ಕೂ ಮುನ್ನ ಅವರ ಬಳಿ ವಾಹನ ಚಾಲನಾ ಪರವಾನಿಗೆ ಇರಲಿಲ್ಲ ಎಂದು ಪ್ರತಿವಾದಿಗಳು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com