150 ಮಂದಿ ಬಲಿ ಪಡೆದ ಜರ್ಮನ್ ವಿಂಗ್ಸ್ ವಿಮಾನದ ಸಹ- ಪೈಲಟ್ ಖಿನ್ನತೆಯಿಂದ ಬಳಲುತ್ತಿದ್ದ: ವರದಿ

ಸಹ- ಪೈಲಟ್ ಆ್ಯಂಡ್ರೆಸ್ ಲುಬಿಟ್ಸ್
ಸಹ- ಪೈಲಟ್ ಆ್ಯಂಡ್ರೆಸ್ ಲುಬಿಟ್ಸ್
Updated on

ಬರ್ಲಿನ್: 150 ಮಂದಿಯನ್ನು ಬಲಿ ಪಡೆದ ಜರ್ಮನ್ ವಿಂಗ್ಸ್ ವಿಮಾನದ ಸಹ- ಪೈಲಟ್ ಕಳೆದ ಆರು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂಬ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.

ಸಹ ಪೈಲಟ್ ಆ್ಯಂಡ್ರೆಸ್ ಲುಬಿಟ್ಸ್ 2009ರಿಂದಲೂ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಈಗಲೂ ಅವರು ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಜರ್ಮನ್ ದಿನ ಪತ್ರಿಕೆಯೊಂದು ಶುಕ್ರವಾರ ವರದಿ ಮಾಡಿದೆ.

ಪ್ರೇಮ ವೈಫಲ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ 28 ವರ್ಷದ ಲುಬಿಟ್ಸ್ ಮನೋರೋಗ ತಜ್ಞರಿಂದ ಖಾಸಗಿ ಆಸ್ಪತ್ರೆಯಲ್ಲಿ ನಿತ್ಯ ಚಿಕಿತ್ಸೆ ಪಡೆಯುತ್ತಿದ್ದ ಎಂದು ವರದಿ ಮಾಡಲಾಗಿದೆ

ಎರಡು ದಿನಗಳ ಹಿಂದೆ ದಕ್ಷಿಣ ಫ್ರಾನ್ಸ್ ನ ಆಲ್ಪ್ಸ್ ಪರ್ವತ ಶ್ರೇಣಿಗಳಲ್ಲಿ ಜರುಗಿದ ವಿಮಾನ ದುರಂತಕ್ಕೆ ಕಾರಣ ಗೊತ್ತಾಗಿದ್ದು, ಇದು ತಾಂತ್ರಿಕ ಕಾರಣದಿಂದ ಸಂಭವಿಸಿದ ದುರಂತವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ಮಾಡಿದ್ದು ಎಂಬುದನ್ನು ಬ್ಲಾಕ್ ಬಾಕ್ಸ್ ಬಹಿರಂಗಮಾಡಿದೆ.

ಸಹ- ಪೈಲಟ್ ಮತ್ತು ಮುಖ್ಯ ಪೈಲಟ್‍ಗಳ ನಡುವಿನ ಜಗಳದಲ್ಲಿ ಯಾವ ತಪ್ಪನ್ನೂ ಮಾಡದ 150 ಮಂದಿ ಸತ್ತಿದ್ದಾರೆ. ಆರಂಭದಲ್ಲಿ ಸಣ್ಣದಿದ್ದ ಜಗಳ, ಬಳಿಕ ದೊಡ್ಡದಾಗಿದೆ. ಮುಖ್ಯಪೈಲಟ್ ಅನ್ನು ಕಾಕ್‍ಪಿಟ್‍ನಿಂದ ಹೊರಹಾಕಿದ ಸಹ ಪೈಲಟ್ ವಿಮಾನವನ್ನು ಪರ್ವತಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಅದೂ 700 ಕಿ.ಮೀ. ವೇಗದಲ್ಲಿ. ಇದರ ಜತೆಗೆ ಬ್ಲಾಕ್ಸ್‍ಬಾಕ್ಸ್‍ನಲ್ಲಿ ಕೊನೆಯ ಹತ್ತು ನಿಮಿಷಗಳ ಕಾಲ ನಡೆದ ಅವರಿಬ್ಬರ ನಡುವಿನ ವಾಕ್ಸಮರದ ಧ್ವನಿಮುದ್ರಣವೂ ಸಿಕ್ಕಿರುವುದು ಸಹಪೈಲಟ್‍ನ ಹೊಣೆಗೇಡಿತನಕ್ಕೆ ಇಂಬು ಕೊಟ್ಟಿದೆ.

ಕಾಕ್ ಪೀಟ್ ನಲ್ಲಿ ಕಾಳಗ
ಕ್ಯಾಪ್ಟನ್‍ನನ್ನು ಕಾಕ್‍ಪಿಟ್‍ನಿಂದ ಹೊರ ಹಾಕುವುದಕ್ಕಿಂತ ಮೊದಲು ಅವರಿಬ್ಬರ ನಡುವೆ ಮುಷ್ಟಿ ಕಾಳಗ ನಡೆದಿತ್ತು. ಒಂದು ಹಂತದಲ್ಲಿ ಸಹ ಪೈಲಟ್ ಆ್ಯಂಡ್ರೆಸ್ ಲುಬಿಟ್ಸ್ ಕ್ಯಾಪ್ಟನ್‍ನತ್ತ ಕುರ್ಚಿಯನ್ನು ಎಸೆದಿದ್ದ ಎಂಬ ಅಂಶ ಬಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com