
ಢಾಕಾ: ಇಲ್ಲಿನ ಪುರಾತನ ಬ್ರಹ್ಮಪುತ್ರಾ ನದಿಯ ತಟದಲ್ಲಿ ವರ್ಷಕ್ಕೊಮ್ಮೆ ನಡೆಯುವ ಅಷ್ಟಮಿ ಸ್ನಾನದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ 10 ಹಿಂದೂ ಯಾತ್ರಾರ್ಥಿಗಳು ಸಾವಿಗೀಡಾಗಿದ್ದಾರೆ. ಸಾವಿಗೀಡಾದವರಲ್ಲಿ 7 ಮಂದಿ ಮಹಿಳೆಯರಾಗಿದ್ದಾರೆ. 50 ಮಂದಿಗೆ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾರಾಯಣಗಂಜ್‌ನಲ್ಲಿ ಬೆಳಗ್ಗೆ 5.48ರ ವೇಳೆ ಅಷ್ಟಮಿ ಸ್ನಾನ ಮಾಡಲು ಸಾವಿರಾರು ಭಕ್ತರು ಜಮಾಯಿಸಿದ್ದರು. ಪುಣ್ಯ ಸ್ನಾನ ಮಾಡಲು ಭಕ್ತರಿಗೆ ಸಹಾಯವಾಗಲೆಂದು 16 ಕಟ್ಟೆಗಳನ್ನು ನಿರ್ಮಿಸಲಾಗಿತ್ತು. ಆದರೆ ಈ ಕಟ್ಟೆಗಳತ್ತ ಹೋಗಲು ಜನರು ನೂಕು ನುಗ್ಗಲು ಮಾಡಿದ್ದಾರೆ. ಇದರಿಂದಾಗಿ ಬೆಳಗ್ಗೆ 9.15 ರಿಂದ 10 ಗಂಟೆಯ ವೇಳೆಗೆ ಕಾಲ್ತುಳಿತ ಸಂಭವಿಸಿದೆ.
ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು 50 ರಿಂದ ಮೇಲ್ಪಟ್ಟವರಾಗಿದ್ದಾರೆ.
Advertisement