
ಶಿಲ್ಲಾಂಗ್: ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇಂದ್ರ ಮಾಜಿ ಸಚಿವ ಪಿ.ಆರ್. ಕಿಂಡಯ್ಯ (87) ಶುಕ್ರವಾರ ನಿಧನರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಿಂಡಯ್ಯ ಅವರ ಸ್ಥಿತಿ ನಿನ್ನೆ ರಾತ್ರಿ ಚಿಂತಾಜನಕವಾದಾಗ ಸ್ಥಳೀಯ ಬೆಥಾನಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೇ.7 1928 ರಂದು ಜನಿಸಿದ ಕಿಂಡಯ್ಯ ಅವರು, ತಮ್ಮ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡ ಮಕ್ಕಳನ್ನು ಅಗಲಿದ್ದಾರೆ. 1995-1988ರವರೆಗೆ ವಿಧಾನಸಭೆಯಲ್ಲಿ ಸ್ಪೀಕರ್, ಬುಡಕಟ್ಟು ವ್ಯವಹಾರಗಳ ಸಚಿವ, 1993ರಲ್ಲಿ ಮಿಜೋರಾಂನ ಗವರ್ನರ್ ಆಗಿದ್ದರು. ಅಲ್ಲದೆ, 1998 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರು ಬಾರಿ ಗೆಲುವು ಸಾಧಿಸಿದ್ದ ಕಿಂಡಯ್ಯ ಅವರು 2009ರಲ್ಲಿ ರಾಜಕೀಯ ವಲಯಕ್ಕೆ ವಿದಾಯ ಹೇಳಿದ್ದರು.
ಕಿಂಡಯ್ಯ ಅವರು ಕೇವಲ ರಾಜಕೀಯ ವಲಯಕ್ಕಷ್ಟೇ ಸೀಮಿತವಾಗಿರದೆ ಹಲವು ಪುಸ್ತಕಗಳನ್ನು ಬರೆದಿದ್ದರು. ಅವುಗಳಲ್ಲಿ ಜವಾಹರ್ ಲಾಲ್ ನೆಹರು, ದಿ ತಿಂಕಿಂಗ್ ಡೈನಾಮೋ, ಮೇಘಾಲಯ ಅಂದು ಮತ್ತು ಇಂದು, ಮಿಜೋ ಸ್ವಾತಂತ್ರ್ಯ ಹೋರಾಟಗಾರರು, ಪಿಲ್ಲರ್ಸ್ ಆಪ್ ಮಿಜೋ ಸೊಸೈಟಿ ಬಿಸೈಡ್ಸ್ ಅದರ್ಸ್ ಎಂಬ ಪುಸ್ತಕಗಳು ಪ್ರಮುಖವಾಗಿದೆ.
Advertisement