ಅಸಭ್ಯ ವರ್ತನೆ: ಅಧಿಕಾರಿ ವಿನೋದ್ ಕುಮಾರ್ ಸಸ್ಪೆಂಡ್

ಇದೊಂದು ನಿಜಕ್ಕೂ ಅತ್ಯಂತ ಹೇಯ ಘಟನೆ. ಸಿಂಗಾಪುರಕ್ಕೆ ಪ್ರಯಾಣ ಮಾಡಬೇಕಾಗಿದ್ದ ಬೆಂಗಳೂರಿನ ಗೃಹಿಣಿಯೊಬ್ಬರ ಜತೆ ದೆಹಲಿ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿ ವಿನೋದ್ ಕುಮಾರ್ ಎಂಬಾತ ತೀರಾ ಅಸಭ್ಯ ಮಾತುಗಳನ್ನಾಡಿದ್ದಾನೆ.
ಗೃಹಿಣಿ ಜತೆ ಅಸಭ್ಯ ವರ್ತನೆ
ಗೃಹಿಣಿ ಜತೆ ಅಸಭ್ಯ ವರ್ತನೆ

ನವದೆಹಲಿ: ಇದೊಂದು ನಿಜಕ್ಕೂ ಅತ್ಯಂತ ಹೇಯ ಘಟನೆ. ಸಿಂಗಾಪುರಕ್ಕೆ ಪ್ರಯಾಣ ಮಾಡಬೇಕಾಗಿದ್ದ ಬೆಂಗಳೂರಿನ ಗೃಹಿಣಿಯೊಬ್ಬರ ಜತೆ ದೆಹಲಿ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿ ವಿನೋದ್ ಕುಮಾರ್ ಎಂಬಾತ ತೀರಾ ಅಸಭ್ಯ ಮಾತುಗಳನ್ನಾಡಿದ್ದಾನೆ.

ಸುದ್ದಿ ವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಖಂಡನೆ ಮತ್ತು ಈ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಆತನನ್ನು ವಜಾ ಮಾಡಲಾಗಿದೆ. ಈ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ದೆಹಲಿ ವಿನೋದ್ ಕುಮಾರ್ ಪೊಲೀಸರಿಂದ ವರದಿ ಕೇಳಿದೆ. ಜತೆಗೆ ಆಕೆಯ ಕ್ಷಮೆಯನ್ನೂ ಕೇಳಿದೆ.

ಏನಿದು ಬೆಳವಣಿಗೆ?
ಉದ್ಯಾನ ನಗರಿಯ ಗೃಹಿಣಿಯೊಬ್ಬರು ಕುಟುಂಬ ಸದಸ್ಯರ ಜತೆ ಮಾ.18ರಂದು ದೆಹಲಿಯಿಂದ ಹಾಂಕಾಂಗ್‍ಗೆ ಹೊರಟಿದ್ದರು. ದೆಹಲಿ ಏರ್ ಪೋರ್ಟ್‍ನ ವಲಸೆ ವಿಭಾಗದ ಕೌಂಟರ್‍ನಲ್ಲಿ ಕಾನೂನು ಪ್ರಕ್ರಿಯೇ ಪೂರ್ತಿಗೊಳಿಸಲು ತೆರಳಿದ್ದರು. ಆಗ ಅಲ್ಲಿದ್ದ ವಿನೋದ್ ಕುಮಾರ್ ಎಂಬ ಕಿಡಿಗೇಡಿ ಅಧಿಕಾರಿ, ಅವರ ಜತೆ ಪರಮ ಅಸಭ್ಯ ಪ್ರಶ್ನೆಗಳನ್ನು ಕೇಳಲಾರಂಭಿಸಿದ. ಅದೂ ಎಂಥಾ ಪ್ರಶ್ನೆಗಳು ಗೊತ್ತೇ? ಹಾಂಕಾಂಗ್‍ಗೆ ಯಾವ ಕಾರಣಕ್ಕೆ ತೆರಳುತ್ತಿದ್ದೀರಿ, ಮಕ್ಕಳೆಷ್ಟು, ತಂದೆತಾಯಿ ಜೊತೆ ಬಿಟ್ಟು ಗಂಡಸರೊಂದಿಗೆ ಮಜಾ ಮಾಡಲು ಹೋಗುತ್ತಿದ್ದಿಯಾ? ನೀವು ಕುಡಿಯುತ್ತೀರಾ, ಸಿಗರೇಟ್ ಸೇದುತ್ತೀರಾ, ಚಿಕನ್ ತಿಂತಿರಾ? ಗಂಡ ಇಲ್ಲದೇ ಇದ್ದಾಗ ಬೇರೆಯವರೊಂದಿಗೆ ಮೋಜು ಮಾಡುತ್ತೀರಾ? ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡಿದ್ದೀರಾ?

ಹಿಂಬಾಲಿಸಿಕೊಂಡು ಬಂದ

ಈ ಆಧುನಿಕ ಕೀಚಕನ ಪ್ರಲಾಪ ಅಲ್ಲಿಗೇ ಮುಗಿಯಲಿಲ್ಲ. ಲಜ್ಜೆಗೆಟ್ಟ ಆ ಅಧಿಕಾರಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಟರ್ಮಿನಲ್‍ಗೆ ತೆರಳುವ ಎಸ್ಕಲೇಟರ್ ವರೆಗೆ ಹಿಂಬಾಲಿಸಿಕೊಂಡು ಬಂದಿದ್ದ.

ಪ್ರವಾಸದ ಬಳಿಕ ದೂರು
ಒಟ್ಟಾರೆ ಘಟನೆ ಬಗ್ಗೆ ಪ್ರವಾಸದ ಬಳಿಕ ಇ-ಮೇಲ್ ಮೂಲಕ ದೆಹಲಿ ವಿಮಾನ ನಿಲ್ದಾಣದ ವಲಸೆ ವಿಭಾಗದ ಆಯುಕ್ತರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ದುರಂತವೆಂದರೆ ದೂರು ನೀಡಿದರೂ, ಮಾಧ್ಯಮಗಳಲ್ಲಿ ವರದಿಯಾಗುವ ವರೆಗೆ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗಿರಲೇ ಇಲ್ಲ. ಸುದ್ದಿ ವಾಹಿನಿಗಳು ಮತ್ತು ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಲೇ ಆತನನ್ನು ವಜಾ ಮಾಡುವ ಕ್ರಮ ಕೈಗೊಳ್ಳಲಾಯಿತು.

ವರದಿ ಕೇಳಿದ ಕೇಂದ್ರ
ಅಧಿಕಾರಿಯ ಕಿಡಿಗೇಡಿತನದ ಬಗ್ಗೆ ಗೃಹ ಇಲಾಖೆ ದೆಹಲಿ ಪೊಲೀಸರಿಂದ ವರದಿ ಕೇಳಿದೆ. ರಾಷ್ಟ್ರೀಯ ಮಹಿಳಾ ಆಯೋಗ ಈ ಬಗ್ಗೆ ಕ್ಷಮೆ ಕೋರುವಂತೆ ಸೂಚಿಸಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹಿಣಿಯ ಕುಟುಂಬ ಸದಸ್ಯರು ಕೇಂದ್ರ ಸರ್ಕಾರಿ ಸ್ವಾಮ್ಯದ ಅಧಿಕಾರಿಯೊಬ್ಬರಿಂದ ಇಂಥ ವರ್ತನೆ ನಿರೀಕ್ಷೆ ಮಾಡಿರಲಿಲ್ಲ. ನಿರ್ಭಯ ಘಟನೆ ನಡೆದ ಬಳಿಕ ಜನರಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳ ಬಗ್ಗೆ ಜಾಗೃತಿ ಮೂಡಿದೆ ಎಂದು ತಿಳಿದಿದ್ದೆವು ಎಂದು ವಿಷಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com