
ಆಗ್ರಾ: ತಾಜ್‍ಮಹಲ್ ಹಿಂದೂಗಳ ದೇವಸ್ಥಾನವಾಗಿತ್ತು ಮತ್ತು ಅದರ ಮಾಲೀಕತ್ವವನ್ನು ಹಿಂದುಗಳಿಗೆ ನೀಡಬೇಕು ಎಂದು ಹಾಕಿದ್ದ ಮೊಕದ್ದಮೆಯನ್ನು ಸಿವಿಲ್ ಕೋರ್ಟ್ ವಜಾಗೊಳಿಸಿದೆ.
17ನೇ ಶತಮಾನದ ಮೊಘಲ್ ಸ್ಮಾರಕ ಹಿಂದುಗಳಿಗೆ ಸೇರಬೇಕೆಂದು ಹರಿ ಶಂಕರ್ ಜೈನ್ ಮತ್ತು ಐವರು ಸೇರಿ ಬುಧವಾರ ಸಿವಿಲ್ ಕೋರ್ಟಗೆ ಮೊಕದ್ದಮೆ ಸಲ್ಲಿಸಿದ್ದರು.
ಮೊಕದ್ದಮೆಯ ಬಗ್ಗೆ ವಿಚಾರಣೆ ನಡೆಸಲು ನಿರಾಕರಿಸಿರುವ ಕೋರ್ಟ್ ಮೊಕದ್ದಮೆಯನ್ನು ವಜಾಗೊಳಿಸಿದೆ ಎಂದು ಫಿರ್ಯಾದಿದಾರರ ಪರ ವಕೀಲ ಕುಲಶ್ರೇಷ್ಟ್ರ ತಿಳಿಸಿದ್ದಾರೆ. ನಾವು ಅಲಹಬಾದ್ ಹೈಕೋರ್ಟ್‍ನಲ್ಲಿ ಮೊಕದ್ದಮೆ ಹೂಡಲಿದ್ದೇವೆ ಎಂದಿದ್ದಾರೆ.
Advertisement