
ನವದೆಹಲಿ/ಚಂಡೀಗಡ: ಹರ್ಯಾಣದಲ್ಲಿ ಭೂಪೀಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ರಾಬರ್ಟ್ ವಾದ್ರಾ-ಡಿಎಲ್‍ಎಫ್ ನಡುವಿನ
ಭೂಹಗರಣ ಬಹಿರಂಗವಾಗಿತ್ತು. ಇತ್ತೀಚೆಗೆ ವಿಧಾನಸಭೆಯಲ್ಲಿ ಮಂಡಿಸಲಾದ ಮಹಾಲೇಖಪಾಲರ ವರದಿ (ಸಿಎಜಿ)ಯಲ್ಲೂ ಅದನ್ನು ಪ್ರಸ್ತಾಪಿಸಲಾಗಿತ್ತು. ಇದೀಗ ಹೂಡಾ
ಅವಧಿಯಲ್ಲೇ ನಡೆದ ರು. 217 ಕೋಟಿ ಮೌಲ್ಯದ ಅಣೆಕಟ್ಟು ಹಗರಣ ಬಯಲಾಗಿದೆ. ಗಮನಾರ್ಹ ಅಂಶವೆಂದರೆ ಮಾಜಿ ಸಿಎಂ ಅವಧಿಯಲ್ಲಿ ನಡೆದಿರುವ ಅತಿ ದೊಡ್ಡ ಹಗರಣ ಎಂಬ ಕುಖ್ಯಾತಿಗೂ ಅದು ಪಾತ್ರವಾಗಿದೆ. ಹೊಸ ಹಗರಣದ ಉಲ್ಲೇಖ ಇರುವುದೂ ಸಿಎಜಿ ವರದಿಯಲ್ಲೇ!
ಪಂಚಕುಲ ಜಿಲ್ಲೆಯಲ್ಲಿ ಕೌಶಲ್ಯಾ ನದಿಗೆ ಅಣೆಕಟ್ಟು ನಿರ್ಮಿಸುವ ಯೋಜನೆ ಅದಾಗಿತ್ತು. 2005ರಲ್ಲಿ ಹೂಡಾ ಸರ್ಕಾರ ಅದಕ್ಕೆ ಅನುಮತಿ ನೀಡಿತ್ತು. ರು.51.37 ಕೋಟಿ
ವೆಚ್ಚದ ಯೋಜನೆಗೆ ರು. 217 ಕೋಟಿ ಎಂದು ಲೆಕ್ಕ ತೋರಿಸಲಾಗಿದೆ. ಅದೊಂದುಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಡಲು ರೂಪಿಸಿದ ಯೋಜನೆಯಾಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
Advertisement