
ನವದೆಹಲಿ: ಭೂಸ್ವಾಧೀನ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಕೇಂದ್ರ ಸರ್ಕಾರ ಈಗ ಸಣ್ಣಪುಟ್ಟ ಪಕ್ಷಗಳನ್ನು ತನ್ನತ್ತ ಸೆಳೆದುಕೊಳ್ಳಲು ಯತ್ನಿಸುತ್ತಿದೆ. ರಾಜ್ಯಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆಯುವುದು ಸುಲಭವಲ್ಲ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಸರ್ಕಾರ ಈ ಹೆಜ್ಜೆಯಿಟ್ಟಿದೆ. ಸಮಾಜವಾದಿ ಪಕ್ಷ, ಶಿವಸೇನೆ, ಬಿಜೆಡಿ ಮತ್ತಿತರ ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆದು ವಿಧೇಯಕಕ್ಕೆ ಹಸಿರು ನಿಶಾನೆ ಪಡೆಯುವುದು ಸರ್ಕಾರದ ಉದ್ದೇಶ.ಕಾಂಗ್ರೆಸ್ ಮತ್ತು ಎಡಪಕ್ಷಗಳು ಯಾವ ಕಾರಣಕ್ಕೂ ವಿಧೇಯಕಕ್ಕೆ ಬೆಂಬಲ ನೀಡು ವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ರಾಜ್ಯಸಭೆಯಲ್ಲಿ ಈ ಪಕ್ಷಗಳ ಒಟ್ಟು ಬಲಾಬಲ 79. 244 ಸದಸ್ಯ ಬಲದ ರಾಜ್ಯಸಭೆಯಲ್ಲಿ ಇತರೆ ಪ್ರಾದೇಶಿಕ ಪಕ್ಷಗಳ 54 ಮಂದಿ ಸದಸ್ಯರಿದ್ದಾರೆ. ಇವರೆಲ್ಲ ಬೆಂಬಲ ನೀಡಿದರೆ ಎನ್‍ಡಿಎ ಹಾದಿ ಸುಗಮ ವಾಗುತ್ತದೆ.ಹಾಗಾಗಿ ರೈತರಿಗೆ ಭೂಸ್ವಾಧೀನ ವನ್ನು ತಿರಸ್ಕರಿಸುವ ಸ್ವಲ್ಪಮಟ್ಟಿನ ಹಕ್ಕು ಸೇರಿದಂತೆ ವಿಧೇಯಕದಲ್ಲಿ ಇನ್ನಷ್ಟು ಬದಲಾವಣೆ ತಂದು ಈ ಪಕ್ಷಗಳ ಬೆಂಬಲ ಪಡೆಯಲು ಸರ್ಕಾರ ಮುಂದಾಗಿದೆ. ಎಸ್ಪಿ ನಾಯಕರು ಸ್ವಾಧೀನ ಪ್ರಕ್ರಿಯೆ ಯನ್ನು ಸರಳಗೊಳಿಸುವ ಬೇಡಿಕೆಯನ್ನು ಇಟ್ಟಿದ್ದಾರೆ. ಅವರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 7 ಸಂಸದರನ್ನು ಹೊಂದಿರುವ ಬಿಜೆಡಿ ಕೂಡ ವಿಧೇಯಕಕ್ಕೆ ಬೆಂಬಲ ಸೂಚಿಸಿದೆ. ಇನ್ನು ತೃಣಮೂಲ ಕಾಂಗ್ರೆಸ್, ಜೆಡಿಯು ಸೇರಿ ಕೆಲ ಪಕ್ಷಗಳ ಮನವೊಲಿಸಲು ಬಾಕಿಯಿದೆ. ಅವರು ಕನಿಷ್ಠಪಕ್ಷ ಮತದಾನದಿಂದ ದೂರವುಳಿದರೂ ಸಾಕಾಗುತ್ತದೆ ಎಂದೂ ಮೂಲಗಳು ಹೇಳಿವೆ.ಮುಂದಿನ ವಾರ ಸರ್ಕಾರ ಭೂಸ್ವಾಧೀನಕ್ಕೆ ಸಂಬಂಧಿಸಿ ಹೊಸ ಸುಗ್ರೀ ವಾಜ್ಞೆ ತರಲಿದ್ದು, ಏ.20ರಿಂದ ಆರಂಭ ವಾಗುವ ಅಧಿವೇಶನದ ಮುಂದಿನ ಭಾಗ ದಲ್ಲಿ ಅದು ಮತ್ತೆ ಮಂಡನೆಯಾಗಲಿದೆ.
Advertisement