ಕುಡ್ಲದ ಕುವರಿ ಅಫ್ರೀನ್ ವಾಜ್

ಅಫ್ರೀನ್ ಮಂಗಳೂರಿನ ಮೆಡಿಕಲ್ ವಿದ್ಯಾರ್ಥಿನಿ. ಮಾರ್ಚ್ 28 ರಂದು ಮುಂಬೈನಲ್ಲಿ ನಡೆದ ಮಿಸ್ ಇಂಡಿಯಾ ಫೈನಲ್ ಸ್ಪರ್ಧೆಯಲ್ಲಿ....
ಎಡದಿಂದ ಬಲಕ್ಕೆ -ವಾರ್ತಿಕ ಸಿಂಗ್ , ಅದಿತಿ ಆರ್ಯ, ಅಫ್ರೀನ್ ರಾಚೆಲ್ ವಾಜ್
ಎಡದಿಂದ ಬಲಕ್ಕೆ -ವಾರ್ತಿಕ ಸಿಂಗ್ , ಅದಿತಿ ಆರ್ಯ, ಅಫ್ರೀನ್ ರಾಚೆಲ್ ವಾಜ್

ಎಫ್‌ಬಿಬಿ ಫೆಮಿನಾ ಮಿಸ್ ಇಂಡಿಯಾ 2015ರ ಸ್ಪರ್ಧೆಯಲ್ಲಿ ಗುರ್‌ಗಾಂವ್‌ನ ಅದಿತಿ ಆರ್ಯ ಮಿಸ್ ಇಂಡಿಯಾ ವರ್ಲ್ಡ್ ಪ್ರಶಸ್ತಿ ಗಳಿಸಿದರೆ, ಮಂಗಳೂರಿನ ಬೆಡಗಿ ಅಫ್ರೀನ್ ರಾಚೆಲ್ ವಾಜ್ ಪ್ರಥಮ ರನ್ನರ್ ಅಪ್ ಆಗಿದ್ದಾರೆ.

ಅಫ್ರೀನ್ ಮಂಗಳೂರಿನ ಮೆಡಿಕಲ್ ವಿದ್ಯಾರ್ಥಿನಿ. ಮಾರ್ಚ್ 28 ರಂದು ಮುಂಬೈನಲ್ಲಿ ನಡೆದ ಮಿಸ್ ಇಂಡಿಯಾ ಫೈನಲ್ ಸ್ಪರ್ಧೆಯಲ್ಲಿ ಅಫ್ರೀನ್‌ಗೆ ನಿಮಗೆ ಸ್ಪೂರ್ತಿ ನೀಡುವ ವಾಕ್ಯ ಯಾವುದು? ಎಂದು ಕೇಳಲಾಗಿತ್ತು. ಅದಕ್ಕೆ ಅಫ್ರೀನ್ ನಾವು ನಮ್ಮ ಬೆಸ್ಟ್ ಫ್ರೆಂಡ್ ಆಗಿರಬೇಕು ಎಂದು ಉತ್ತರಿಸಿ ತೀರ್ಪುಗಾರರ ಮೆಚ್ಚುಗೆ ಪಡೆದಿದ್ದಳು. ಸ್ಫರ್ಧೆಯಲ್ಲಿ ಟಾಪ್ 5 ಸ್ಪರ್ಧಾರ್ಥಿಗಳಿಗೆ "ಯಾವ ವಯಸ್ಸಿನಲ್ಲಿ ವ್ಯಕ್ತಿಗೆ ವಯಸ್ಸಾಗಿದೆ ಎಂದು ಹೇಳಬಹುದು? ಯಂಗ್ ಆಗಿ ಕಾಣಿಸಿಕೊಳ್ಳಲು ಇರುವ ಸೀಕ್ರೆಟ್‌ಗಳೇನು? "ಎಂದು ಕೇಳಲಾಯಿತು. ಈ ಪ್ರಶ್ನೆಗೆ ಅಫ್ರೀನ್ ಉತ್ತರಿಸಿದ್ದು ಹೀಗೆ: ಒಬ್ಬ ವ್ಯಕ್ತಿ ಯುವಕನಿಂದ ಹಿರಿಯ ವ್ಯಕ್ತಿಯಾಗುವುದು ವ್ಯಕ್ತಿಗತವಾಗಿರುತ್ತದೆ. ನೀವು ವಯಸ್ಸಾದವರಂತೆ ವರ್ತಿಸಿದರೆ ನೀವು ವಯಸ್ಸಾದವರಂತೆ ಕಾಣುತ್ತೀರಿ. ನೀವು ನಗು ನಗುತ್ತಾ ಇದ್ದರೆ ನೀವು ಯಂಗ್ ಆಗಿಯೇ ಇರ್ತೀರಿ.

ಮುಂಬೈನಲ್ಲಿ ಜನಿಸಿದ ಅಫ್ರೀನ್ ನ್ಯೂಜಿಲ್ಯಾಂಡ್‌ನಲ್ಲೇ ನೆಲೆಯೂರಿದ್ದರು. ಈಕೆ ನ್ಯೂಜಿಲ್ಯಾಂಡ್‌ನ ಸೌಂದರ್ಯ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದಳು. ಇದೀಗ ಮಂಗಳೂರಿನ ಎಜೆ ಇನ್ಸಿಟ್ಯೂಟ್ ಆಫ್ ಸಯನ್ಸ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿರುವ ಅಫ್ರೀನ್ ಫ್ಯಾಷನ್ ಎಬಿಸಿಡಿಯಲ್ಲಿ ಮಾಡೆಲಿಂಗ್ ವೃತ್ತಿ ಆರಂಭಿಸಿದ್ದಾರೆ. ಈಕೆ ಫ್ಯಾಷನ್ ಎಬಿಸಿಡಿ ಯ ಬ್ರ್ಯಾಂಡ್ ಅಂಬಾಸಿಡರ್ ಕೂಡಾ ಆಗಿದ್ದಾರೆ. ಕ್ಯಾಂಪಸ್ ಪ್ರಿನ್ಸೆಸ್ 2015 ಆಗಿ ಗೆದ್ದ ಈಕೆ ತದನಂತರ ಕ್ಯಾಂಪಸ್ ಪ್ರಿನ್ಸೆಸ್ ಆಫ್ ಇಂಡಿಯಾ 2015 ಸ್ಪರ್ಧೆಯಲ್ಲಿ ಗೆದ್ದು ಮಿಸ್ ಇಂಡಿಯಾ 2015 ಸ್ಪರ್ಧೆಗೆ ನೇರ ಪ್ರವೇಶ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com