ಪಪುವಾದಲ್ಲಿ ಪ್ರಬಲ ಭೂಕಂಪ, ಸಣ್ಣ ಸುನಾಮಿ

ಆಸ್ಟ್ರೇಲಿಯಾ ಸಮೀಪದ ಪಪುವಾ ನ್ಯೂಜಿನಿ ದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸಮುದ್ರದ ಮಧ್ಯದಲ್ಲಿ ಸಣ್ಣ ಮಟ್ಟದಲ್ಲಿ ಸುನಾನಿ ಎದ್ದಿತ್ತು ಎಂದು ತಿಳಿದುಬಂದಿದೆ.
ಭೂಕಂಪ
ಭೂಕಂಪ

ಪುಪುವಾ(ನ್ಯೂಗಿನಿಯಾ): ಆಸ್ಟ್ರೇಲಿಯಾ ಸಮೀಪದ ಪಪುವಾ ನ್ಯೂಗಿನಿಯಾ ದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸಮುದ್ರದ ಮಧ್ಯದಲ್ಲಿ ಸಣ್ಣ ಮಟ್ಟದಲ್ಲಿ ಸುನಾನಿ ಎದ್ದಿತ್ತು ಎಂದು ತಿಳಿದುಬಂದಿದೆ.

ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀರ್ವತೆ 7.7 ರಷ್ಚಿತ್ತು. ಈ ಕಂಪನದಿಂದಾಗಿ 1.5 ಅಡಿಯಷ್ಟು ಸುನಾಮಿ ಕೂಡ ಎದ್ದಿತ್ತು. ರಬೂಲ್ ಎಂಬಲ್ಲಿ 65 ಕಿ.ಮೀ ಆಳದಲ್ಲಿ ಸ್ಥಳೀಯ ಕಾಲಮಾನ ಪ್ರಕಾರ ಬೆಳಗ್ಗೆ 10 ಗಂಟೆಗೆ ಸಂಭವಿಸಿದೆ.

ಈ ಭೂಕಂಪನದಿಂದ ಹೆಚ್ಚೇನೂ ಹಾನಿಯಾಗಿಲ್ಲ. ಆದರೆ, ಕಂಪನದಿಂದ 10 ಅಡಿಯಷ್ಟು ದೈತ್ಯ ಅಲೆಗಳು ಏಳಬಹುದೆಂದು ಅಧಿಕಾರಿಗಳು ಎಚ್ಚರಿಸಿದ್ದರು.

ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿರುವ ಪಪುವಾ ನ್ಯೂಗಿನಿಯಾ ದೇಶದಲ್ಲಿ ಭೂಕಂಪ ಸಂಭವಿಸಿದ್ದು, 2 ಸಾವಿರ ಕಿ.ಮೀ ಸುತ್ತಮುತ್ತಲಿನ ಪ್ರದೇಶದಲ್ಲೂ ಕಂಪನದ ಅನುಭವವಾಯಿತಂತೆ. ಆಸ್ಟ್ರೇಲಿಯಾದ್ಯಂತ ತೀವ್ರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com