ಪ್ಲೀಸ್... ನನಗೇನೂ ಮಾಡ್ಬೇಡಿ...

ಫೋಟೋಗ್ರಾಫರ್ ಫೋಟೋ ತೆಗೆಯಲು ಕ್ಯಾಮೆರಾ ತೆಗೆದಾಗ ಅದು ಗನ್ ಆಗಿರಬಹುದೆಂದು ಹೆದರಿ ಶರಣಾಗಿದ್ದೇನೆ ಎನ್ನುತ್ತಾ ತನ್ನೆರಡೂ...
ನಾದಿಯಾ  ಶೇರ್ ಮಾಡಿದ ಸಿರಿಯನ್  ಪುಟಾಣಿಯ ಫೋಟೋ (ಕೃಪೆ: ಟ್ವಿಟ್ಟರ್ )
ನಾದಿಯಾ ಶೇರ್ ಮಾಡಿದ ಸಿರಿಯನ್ ಪುಟಾಣಿಯ ಫೋಟೋ (ಕೃಪೆ: ಟ್ವಿಟ್ಟರ್ )

ಕ್ಯಾಮೆರಾ ಮತ್ತು ಗನ್ ನಡುವಿನ ವ್ಯತ್ಯಾಸವನ್ನು ಅರಿಯುವ ಪ್ರಾಯ ಆಗಿಲ್ಲ ಈ ಸಿರಿಯನ್ ಪುಟಾಣಿಗೆ. ಈ ಕಾರಣದಿಂದಾಗಿಯೇ  ಫೋಟೋಗ್ರಾಫರ್ ಫೋಟೋ ತೆಗೆಯಲು ಕ್ಯಾಮೆರಾ ತೆಗೆದಾಗ ಅದು ಗನ್ ಆಗಿರಬಹುದೆಂದು ಹೆದರಿ ಶರಣಾಗಿದ್ದೇನೆ ಎನ್ನುತ್ತಾ ತನ್ನೆರಡೂ ಕೈಗಳನ್ನು ಮೇಲೆತ್ತಿ ನಿಂತಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಾಮಾಜಿಕ ತಾಣಗಳಲ್ಲಿ  ಈ ಫೋಟೋ ಹರಿದಾಡಿದ್ದು, ಸಿರಿಯಾದಲ್ಲಿನ ಮಕ್ಕಳ ಸ್ಥಿತಿಯನ್ನು ಈ ಫೋಟೋ ಬಿಂಬಿಸಿತ್ತು.  ಗಾಜಾ ಮೂಲದ ಫೋಟೋ ಜರ್ನಲಿಸ್ಟ್  ನಾದಿಯಾ ಅಬು ಶಬಾನ್,  ಕ್ಯಾಮೆರಾ ಮುಂದೆ ದಯನೀಯವಾಗಿ ನಿಂತಿರುವ ಈ ಪುಟಾಣಿಯ ಫೋಟೋವನ್ನು ಟ್ವೀಟ್ ಮಾಡಿದ್ದರು.

2011 ಮಾರ್ಚ್ 15 ರಿಂದ ಸಿರಿಯಾದಲ್ಲಿ ಆರಂಭವಾದ ಆಂತರಿಕ ಗಲಭೆ ಇನ್ನೂ ಮುಂದುವರಿದೆ. ಯುದ್ಧ, ಆಯುಧಗಳನ್ನು ಮಾತ್ರ ನೋಡಿ ಬೆಳೆದ ಮಕ್ಕಳ ಮನಸ್ಸಲ್ಲಿ ಆ ಭಯ ಹೇಗೆ ಬೇರೂರಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವೇ ಈ ಚಿತ್ರ.  ವಿಶ್ವಸಂಸ್ಥೆಯ ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ 14 ಮಿಲಿಯನ್ ಮಕ್ಕಳು ಈ ಯುದ್ಧದ ಪ್ರಭಾವಕ್ಕೊಳಗಾಗಿ ಯಾತನಾಮಯ ಬಾಲ್ಯವನ್ನು ಅನುಭವಿಸುತ್ತಿದ್ದಾರೆ. ಈ ಯುದ್ಧಗಳಿಂದಾಗಿ ಅವರಿಗೆ ಬಾಲ್ಯ ನಷ್ಟವಾಗುತ್ತಿದೆ. ಕುತೂಹಲದಿಂದ ನೋಡುವ ಅವರ ಕಣ್ಣುಗಳಲ್ಲಿ ಯುದ್ಧದ ಭಯವೂ, ನೋವು ಆವರಿಸಿಕೊಂಡಿದೆ. ಇಂಥಾ ಪರಿಸ್ಥಿತಿಯಿಂದಾಗಿಯೇ ಫೋಟೋಗ್ರಾಫರ್ ಕ್ಯಾಮೆರಾ ತೆಗೆಯುವಾಗ ಈ ಪುಟಾಣಿ ಗನ್ ಎಂದು ಹೆದರಿ ಕೈಗಳೆರಡನ್ನೂ ಮೇಲೆತ್ತಿ ನಿಂತಿದ್ದು.

ನಾದಿಯಾ  ಶೇರ್ ಮಾಡಿದ ಈ ಫೋಟೋ ಸಾಮಾಜಿಕ ತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಮೊದಲು ಫೋಟೋದಲ್ಲಿರುವುದು 4 ಹರೆಯದ ಬಾಲಕಿ ಎಂದು ಹೇಳಲಾಗಿತ್ತು. ಆದರೆ  ಫೋಟೋದಲ್ಲಿರುವುದು ಬಾಲಕಿಯಲ್ಲ, ಅಡಿ ಹುಡಿಯಾ ಎಂಬ ಬಾಲಕ. ಈತನ ಫೋಟೋ ಕ್ಲಿಕ್ಕಿಸಿದ್ದು ಓಸ್ಮಾನ್ ಸಾಗಿರ್ಲಿ ಎಂಬ ಫೋಟೋಗ್ರಾಫರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com