ಕೇಂದ್ರ ಸಂಪುಟಕ್ಕೆ ಶೀಘ್ರವೇ ಸರ್ಜರಿ

ಕೆಲಸ ಮಾಡದ ಸಚಿವರಿಗೆ ಕೊಕ್, ಕೆಲಸ ಮಾಡುವ ಸಚಿವರಿಗೆ ಬಡ್ತಿ... ಇದು ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಯೋಚನೆ....
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಕೆಲಸ ಮಾಡದ ಸಚಿವರಿಗೆ ಕೊಕ್, ಕೆಲಸ  ಮಾಡುವ ಸಚಿವರಿಗೆ ಬಡ್ತಿ... ಇದು ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಯೋಚನೆ. ಬೆಂಗಳೂರಿನಲ್ಲಿ ಏ. 2 ರಿಂದ ಆರಂಭವಾಗುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮುಗಿದ ತಕ್ಷಣವೇ `ಕೆಲಸ ಮಾಡದವರಿಗೆ' ತಕ್ಕ ಶಾಸ್ತಿ ಕಾದಿದೆ ಎಂದೇ ಹೇಳಲಾಗುತ್ತಿದೆ. ಇದಕ್ಕಾಗಿ ಈಗಿ ನಿಂದಲೇ ಸಿದಟಛಿತೆ ನಡೆದಿದ್ದು, ಮೈತ್ರಿ ಪಕ್ಷಗಳತ್ತಲೂ ಸಂಪುಟ ಹಸ್ತ ತೋರಲಿದ್ದಾರೆ ಎನ್ನಲಾಗಿದೆ.
ಮುಫ್ತಿಗೆ ಸ್ಥಾನ: ಜಮ್ಮು - ಕಾಶ್ಮೀರ ಮುಖ್ಯ ಮಂತ್ರಿ ಮುಫ್ತಿ  ಮೊಹಮ್ಮದ್ ಪುತ್ರಿ ಮೆಹಬೂಬ ಮುಫ್ತಿ  ಅವರಿಗೆ ಸಂಪುಟದಲ್ಲಿ ಕ್ಯಾಬಿನೆಟ್ ಸ್ಥಾನ ಸಿಗುವ ಸಂಭವವಿದೆ. ಹಾಗೆಯೇ  ಶಿವಸೇನೆಯ ಅನಂತ ದೇಸಾಯಿ ಅವರಿಗೂ ಸ್ವತಂತ್ರ ಹೊಣೆಗಾರಿಕೆ ಸಿಗುವ ಎಲ್ಲಾ ಸಾಧ್ಯತೆಗಳಿವೆ. 75ಕ್ಕೆ ಔಟ್: 75 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸಂಪುಟದಲ್ಲಿ ಸ್ಥಾನವಿಲ್ಲ ಎಂಬ ನೀತಿ, ಈ ಬಾರಿಯ ಪುನಾರಚನೆಯಲ್ಲಿ ಜಾರಿಗೆ ಬರಲಿದೆ.
ನಜ್ಮಾ ಹೆಫ್ತುಲ್ಲಾ  ಅವರಿಂದ ಅಲ್ಪಸಂಖ್ಯಾತ ವ್ಯವಹಾರ ಖಾತೆಯನ್ನು ಪಡೆದು ಮುಖ್ತಾರ್ ಅಬ್ಬಾಸ್ ನಖ್ವಿ ಅವರಿಗೆ ನೀಡುವ ಸಾಧ್ಯತೆ ಇದೆ. ನಜ್ಮಾ
ಅವರಿಗೆ ರಾಜ್ಯವೊಂದರ ರಾಜ್ಯಪಾಲ ಹುದ್ದೆ ನೀಡುವ ಸಂಭವವಿದೆ. ಉತ್ತಮವಾಗಿ ಕೆಲಸ ಮಾಡುತ್ತಿ ರುವ ಜಯಂತ್ ಸಿನ್ಹಾ ಅವರಿಗೆ ಕಾರ್ಪೊರೇಟ್
ವ್ಯವಹಾರ ಖಾತೆ ಸಿಗಲಿದೆ.
9 ರಾಜ್ಯ`ಪಾಲ'ರೇ ಇಲ್ಲ : ಮೊನ್ನೆಯಷ್ಟೇ ಮಿಜೋರಾಂ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ವಜಾ ಮಾಡಿದ್ದು, ಖಾಲಿ ಹುದ್ದೆಗಳಸಂಖ್ಯೆ 9ಕ್ಕೇರಿದೆ. ಈ 9 ರಾಜ್ಯಗಳ ಉಸ್ತು
ವಾರಿಯನ್ನು 6 ರಾಜ್ಯಪಾಲರು ನೋಡಿಕೊಳ್ಳುತ್ತಿ ದ್ದಾರೆ. ಅದರಲ್ಲೂ ಪಶ್ಚಿಮ ಬಂಗಾಳ ರಾಜ್ಯಪಾಲರಂತೂ ತಮ್ಮ ರಾಜ್ಯವೂ ಸೇರಿ ಇನ್ನೂ 3 ರಾಜ್ಯಗಳ ಹೊಣೆ ಹೊತ್ತಿದ್ದಾರೆ. ಇವರ ಪಾಲಲ್ಲಿ ಬಿಹಾರ, ಮಿಜೋರಾಂ, ಮೇಘಾಲಯ ಗಳು ಸೇರಿವೆ. ಇನ್ನು ನಾಗಾಲ್ಯಾಂಡ್‍ನ ಗವರ್ನರ್ ಪದ್ಮನಾಭ ಆಚಾರ್ಯ ಅವರು ಮೂರು ರಾಜ್ಯಗಳ ಹೊಣೆ ಹೊತ್ತಿದ್ದಾರೆ.

ಹೆಚ್ಚುವರಿ ಹೊಣೆ

ಕಪ್ತಾನ್ ಸಿಂಗ್ ಸೋಲಂಕಿ -ಹರ್ಯಾಣ ಪಂಜಾಬ್
 ಕಲ್ಯಾಣ್ ಸಿಂಗ್ - ರಾಜಸ್ಥಾನ -ಹಿಮಾಚಲ ಪ್ರದೇಶ
 ಕೆ.ಕೆ. ಪೌಲ್-ಉತ್ತರಖಾಂಡ- ಮಣಿಪುರ
 ಕೇಸರಿನಾಥ್ ತ್ರಿಪಾಠಿ -ಪಶ್ಚಿಮ ಬಂಗಾಳ - ಬಿಹಾರ,ಮಿಜೋರಾಂ, ಮೇಘಾಲಯ
 ಪದ್ಮನಾಭ ಆಚಾರ್ಯ-ನಾಗಾಲ್ಯಾಂಡ್ - ಅಸ್ಸಾಂ, ತ್ರಿಪುರ
ಅಜಯ ಕುಮಾರ್ ಸಿಂಗ್- ಅಂಡಮಾನ್, ನಿಕೋಬಾರ್ - ಪುದುಚೇರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com