ಯೆಮೆನ್ ಗಲಭೆ: ಜೀವಭಯದಲ್ಲಿ ಭಾರತೀಯರು, ರಕ್ಷಣೆಗಾಗಿ ಮೊರೆ

ಆಂತರಿಕ ಸಂಘರ್ಷದಿಂದ ನಲುಗಿರುವ ಮಧ್ಯ ಪ್ರಾಚ್ಯ ರಾಷ್ಟ್ರ ಯೆಮೆನ್ ನ ಬಂದರು ನಗರವಾದ ಅಡೇನ್ ನಲ್ಲಿ 400 ರಿಂದ 500 ಭಾರತೀಯರು ಸಿಲುಕಿದ್ದು, ರಕ್ಷಣೆಗಾಗಿ ಸಹಾಯ ಹಸ್ತ ಚಾಚುತ್ತಿದ್ದಾರೆ.
ಯೆಮೆನ್ ಗಲಭೆ
ಯೆಮೆನ್ ಗಲಭೆ

ನವದೆಹಲಿ: ಆಂತರಿಕ ಸಂಘರ್ಷದಿಂದ ನಲುಗಿರುವ ಮಧ್ಯ ಪ್ರಾಚ್ಯ ರಾಷ್ಟ್ರ ಯೆಮೆನ್ ನ ಬಂದರು ನಗರವಾದ ಅಡೇನ್ ನಲ್ಲಿ 400 ರಿಂದ 500 ಭಾರತೀಯರು ಸಿಲುಕಿದ್ದು, ರಕ್ಷಣೆಗಾಗಿ ಸಹಾಯ ಹಸ್ತ ಚಾಚುತ್ತಿದ್ದಾರೆ.

ಮುಖ್ಯವಾಗಿ ದಾದಿಯರು, ಶಾಲಾ ಶಿಕ್ಷಕಿಯರು ಸೇರಿದಂತೆ ಇನ್ನೀತರ ವೃತ್ತಿಪರರು ಸೇರಿದಂತೆ 500 ಮಂದಿ ಮನೆಗಳಲ್ಲೇ ಬಂಧಿಯಾಗಿದ್ದಾರೆ. ಈ ಬಗ್ಗೆ ದೂರವಾಣಿ ಮೂಖೇನ ಮಾತನಾಡಿದ ಕೇರಳ ಮೂಲದ 29 ವರ್ಷದ ಮನೀಶ ಗೋಪದಾಸ್ ತಮ್ಮ ಆತಂಕವನ್ನು ಹೊರಹಾಕಿದ್ದಾರೆ.

ಈ ಮಧ್ಯೆ ಸೌದಿ ಅರೇಬಿಯಾ ಮಿಲಿಟರಿ ಪಡೆ ವೈಮಾನಿಕ ದಾಳಿ ನಡೆಸುತ್ತಿದ್ದು, ಕಳೆದ ರಾತ್ರಿ ಮನೀಷ್ ಅಲ್-ಕರಮ ಆಸ್ಪತ್ರೆಯ ರೂಮಿನಲ್ಲಿದ್ದ ಸಂದರ್ಭದಲ್ಲಿ ಭಾರಿ ಸ್ಫೋಟವಾಯಿತು. ಈ ವೇಳೆ ರೂಂನ ಗೋಡೆಗಳು ಬಿರುಕು ಬಿಟ್ಟವು. ಕೂಡಲೇ ಹೊರ ಬಂದು ಆಸ್ಪತ್ರೆಯ ಮಹಡಿಗೆ ಹೋದೆ ಎಂದು ಹೇಳಿದ್ದಾರೆ. ತನಗಿಲ್ಲಿ ಜೀವ ಭಯ ಕಾಡುತ್ತಿದ್ದು, ಸ್ವದೇಶಕ್ಕೆ ಮರಳಲು ಸಿದ್ಧನಿರುವುದಾಗಿ ಹೇಳಿದ್ದಾರೆ.

ಅಲ್ಲದೆ ಇದೇ ಆಸ್ಪತ್ರೆಯಲ್ಲಿ ಇನ್ನೂ ಮೂವರು ದಾದಿಯರು ಕೆಲಸ ಮಾಡುತ್ತಿದ್ದು, ಕೇವಲ 10 ನಿಮಿಷ ಪ್ರಯಾಣಿಸಿದರೆ ಅಡೇನ್ ಏರ್ ಪೋರ್ಟ್ ಸಿಗುತ್ತದೆ. ಅಲ್ಲದೆ ಮತ್ತೊಂದು ಆತಂಕವನ್ನು ವಿವರಿಸಿರುವ ಮನೀಶ ಕಳೆದ 8 ವರ್ಷಗಳಿಂದ ಯೆಮೆನ್ ನಲ್ಲಿ ದಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಪಾಸ್ ಪೋರ್ಟ್ ಗಳನ್ನು ನೀಡಲು ಆಸ್ಪತ್ರೆಯ ಆಡಳಿತ ಮಂಡಳಿ ನಿರಾಕರಿಸುತ್ತೀವೆ ಈ ಬಗ್ಗೆ ಬಾರತೀಯ ರಾಯಭಾರಿ ಕಚೇರಿಗೂ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com