ಆಪ್ ಉಚ್ಛಾಟಿತ ಯಾದವ್, ಭೂಷಣ್‌ರಿಂದ ಹೊಸ ಪಕ್ಷ ಸ್ಥಾಪನೆ?

ಆಮ್ ಆದ್ಮಿ ಪಕ್ಷ(ಆಪ್)ದ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಉಚ್ಚಾಟನೆಗೊಂಡಿರುವ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್...
ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್
ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್

ನವದೆಹಲಿ: ಆಮ್ ಆದ್ಮಿ ಪಕ್ಷ(ಆಪ್)ದ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಉಚ್ಚಾಟನೆಗೊಂಡಿರುವ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರು ಆಪ್ ಸೆಡ್ಡು ಹೊಡೆಯಲು ಮುಂದಾಗಿದ್ದು, ಹೊಸ ಪಕ್ಷ ಸ್ಥಾಪನೆ ಮಾಡುವ ಸೂಚನೆ ನೀಡಿದ್ದಾರೆ.

ಉಚ್ಛಾಟಿತ ಇಬ್ಬರು ನಾಯಕರು ಏಪ್ರಿಲ್ 14ರಂದು ಬೆಂಬಲಿಗರ ಸಭೆ ಕರದಿದ್ದು, ಶೀಘ್ರದಲ್ಲೆ ಹೊಸ ಪಕ್ಷವನ್ನು ರಚಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಆಪ್ ನ ಸಂಸ್ಥಾಪಕ ಸದಸ್ಯರಾದ ಯಾದವ್ ಮತ್ತು ಭೂಷಣ್ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಇತ್ತೀಚೆಗಷ್ಟೇ ವಜಾ ಮಾಡಲಾಗಿತ್ತು. ಏ.14ರ ಸಭೆಗೆ ಎಎಪಿಯ ಆಂತರಿಕ ಲೋಕಪಾಲದಿಂದ ವಜಾಗೊಳಿಸಲ್ಪಟ್ಟ ಅಡ್ಮಿರಲ್ ಎಲ್.ರಾಮದಾಸ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ಆಹ್ವಾನಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತೀವೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಭಾನುವಾರ ಪ್ರಶಾಂತ್ ಭೂಷಣ್ ಅವರನ್ನು ರಾಷ್ಟ್ರೀಯ ಶಿಸ್ತುಪಾಲನ ಸಮಿತಿಯಿಂದಲೂ ಗೇಟ್ ಪಾಸ್ ನೀಡಿತ್ತು. ಯಾದವ್ ಮತ್ತು ಭೂಷಣ್ ಅವರನ್ನು ವಜಾಗೊಳಿಸಿದ್ದಕ್ಕೆ ಅಸಮಾಧಾನಗೊಂಡ ಮೇಧಾ ಪಾಟ್ಕರ್ ಭಾನುವಾರ ಎಎಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಏತನ್ಮಧ್ಯೆ ಪಿಟಿಐ ಜೊತೆ ಮಾತನಾಡಿದ್ದ ಯೋಗೇಂದ್ರ ಯಾದವ್,  ತಮ್ಮ ಹಾಗೂ ಬೆಂಬಲಿಗರ ಮುಂದಿನ ನಡೆ ಏನು ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದ್ದರು. ಏ.14ರ ಅಂಬೇಡ್ಕರ್ ಜನ್ಮದಿನದಂದು ಬೆಂಬಲಿಗರು ಹಾಗೂ ನಮ್ಮ ಆಪ್ತರು ಒಟ್ಟು ಸೇರಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com