ಮೋದಿಗೆ ಎಸ್‍ಪಿಜಿ ಸರ್ಪಗಾವಲು

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಭರದ ತಯಾರಿ ನಡೆದಿದೆ. ಏಪ್ರಿಲ್ 2ರಿಂದ 4ರವರೆಗೆ ನಡೆಯುವ ಕಾರ್ಯಕಾರಿಣಿಗೆ...
ನರೇಂದ್ರ ಮೋದಿ
ನರೇಂದ್ರ ಮೋದಿ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಭರದ ತಯಾರಿ ನಡೆದಿದೆ. ಏಪ್ರಿಲ್ 2ರಿಂದ 4ರವರೆಗೆ ನಡೆಯುವ ಕಾರ್ಯಕಾರಿಣಿಗೆ
ಪ್ರಧಾನಿ ನರೇಂದ್ರ ಮೋದಿ ಸಹಿತ 8 ರಾಜ್ಯಗಳ ಮುಖ್ಯಮಂತ್ರಿಗಳು, ಇಬ್ಬರು ಉಪ ಮುಖ್ಯಮಂತ್ರಿಗಳು, ಹಲವು ಕೇಂದ್ರ ಸಚಿವರು ಪಾಲ್ಗೊಳ್ಳುತ್ತಿರುವ ಕಾರಣ ವಿಶೇಷ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಮಂಗಳವಾರ ವಿಶೇಷ ಭದ್ರತಾ ಪಡೆಯವರು ಕಾರ್ಯಕಾರಿಣಿ ನಡೆಯುವ ಹೊಟೇಲ್ ಅಶೋಕವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು. ಹೊಟೇಲ್‍ನ ಪ್ರತಿ ಮೂಲೆ ಮೂಲೆಯನ್ನು ಪರಿಶೀಲಿಸಿದ ರಲ್ಲದೇ, ಕಾರ್ಯಕಾರಿಣಿ ನಡೆಯುವ ಸ್ಥಳ, ಪ್ರಧಾನಿ ಆಗಮನ- ನಿರ್ಗಮದ ದ್ವಾರ ಸೇರಿ, ಕಾರ್ಯ ಕಾರಿಣಿ ಚಟುವಟಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಎಸ್‍ಪಿಜಿ ಇನ್ನೊಂದು ತಂಡ ಏಪ್ರಿಲ್ 3ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಬಹಿರಂಗಸಭೆ ಪ್ರದೇಶಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿತು. ಯಾವುದೇ ಪರಿಶೀಲ ನೆಗೊಳಪಡದೇ ನಿರ್ಮಾಣ ವಾಗಿದ್ದ ವೇದಿಕೆಯನ್ನು ನಿರ್ಮಿಸಲಾ ಗಿತ್ತು. ಅನುಮತಿಯಿಲ್ಲದೇ ನಿರ್ಮಾಣ ಗೊಂಡಿದ್ದ 60-40 ಅಡಿಯ ವೇದಿಕೆಯನ್ನು ಪೂರ್ಣ ತೆಗೆಯಲಾಯಿತು. ಪಕ್ಷದೊಳಗಿನ ಚಟುವಟಿಕೆ ಕುರಿತು ಮಾಹಿತಿ ನೀಡಿದ ಪಕ್ಷದ ಮಾಧ್ಯಮ ಪ್ರಮುಖ್ ಪ್ರಕಾಶ್, ಕಾರ್ಯಕಾರಿಣಿ ಅಚ್ಚುಕಟ್ಟಾಗಿ ನಡೆಯುವ ಉದ್ದೇಶದಿಂದ 33 ಸಮಿತಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಪೂರ್ವತಯಾರಿ ಮಾಡಿಕೊಳ್ಳುತ್ತಿವೆ. ಅದೇ ರೀತಿ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ, ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಸೇರಿದಂತೆ ಹಿರಿಯ ಮುಖಂಡರು ಸಭೆ ನಡೆಸಿದ್ದಾರೆ ಎಂದರು. ಬುಧವಾರ ಮಧ್ಯಾಹ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸಲಿದ್ದಾರೆ. ಜೊತೆಗೆ ಪಕ್ಷದ ಪ್ರಮುಖರು ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ಪ್ರಮುಖ ನಾಯಕರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರ ಸ್ವಾಗತಕ್ಕೆ ಎಲ್ಲಾ ತಯಾರಿ ನಡೆದಿದೆ .

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com