ಉರಿ ಬಿಸಿಲಲ್ಲಿ ಧರಣಿ ಮಾಡಬೇಡಿ, ಕಪ್ಪಗಾಗ್ತಿರಾ: ಗೋವಾ ಸಿಎಂ

ಉರಿಯುವ ಬಿಸಿಲಿನಲ್ಲಿ ಪ್ರತಿಭಟನೆ ಮಾಡಬೇಡಿ. ಬಿಸಿಲಿಗೆ ಮುಖದ ಬಣ್ಣ ಕಪ್ಪಾಗುತ್ತದೆ. ಮುಖದ ಬಣ್ಣ ಕಪ್ಪಾದರೆ ಒಳ್ಳೆಯ ವರ ಸಿಗುವುದಿಲ್ಲ...
ಲಕ್ಷ್ಮೀಕಾಂತ ಪರ್ಸೇಕರ್
ಲಕ್ಷ್ಮೀಕಾಂತ ಪರ್ಸೇಕರ್

ಪಣಜಿ: ಉರಿಯುವ ಬಿಸಿಲಿನಲ್ಲಿ ಪ್ರತಿಭಟನೆ ಮಾಡಬೇಡಿ. ಬಿಸಿಲಿಗೆ ಮುಖದ ಬಣ್ಣ ಕಪ್ಪಾಗುತ್ತದೆ. ಮುಖದ ಬಣ್ಣ ಕಪ್ಪಾದರೆ ಒಳ್ಳೆಯ ವರ ಸಿಗುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜೆಡಿಯು ಅಧ್ಯಕ್ಷ ಶರದ್‌ ಯಾದವ್‌ ಅವರ ದಕ್ಷಿಣ ಭಾರತದ ಮಹಿಳೆಯರು ಕಪ್ಪಗಿದ್ದರೂ ಸುಂದರಿಯರು ಎಂಬ ವಿವಾದಿತ ಹೇಳಿಕೆ ಇನ್ನೂ ಹಸಿ ಹಸಿಯಾಗಿರುವಾಗಲೇ, ಗೋವಾ ಸಿಎಂ ಕೂಡ ಅಂಥದ್ದೇ ವಿವಾದಾತ್ಮಕ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಖ್ಯಮಂತ್ರಿ ಕಚೇರಿ ಮುಂದೆ 108 ಆಂಬುಲೆನ್ಸ್‌ ಸೇವೆಗೆ ನಿಯೋಜನೆಗೊಂಡಿದ್ದ ದಾದಿಯರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಬಳಿಕ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರು, ‘ಹೆಣ್ಣು ಮಕ್ಕಳು ಈ ರೀತಿ ಬಿಸಿಲಿನಲ್ಲಿ ಕುಳಿತು ಉಪವಾಸ ಸತ್ಯಾಗ್ರಹ ಮಾಡಬಾರದು. ಪ್ರಖರ ಬಿಸಿಲಿಗೆ  ಮುಖದ ಬಣ್ಣ ಕಪ್ಪಾಗುತ್ತದೆ. ಮುಖದ ಬಣ್ಣ ಕಪ್ಪಾದರೆ ಒಳ್ಳೆಯ ವರ ಸಿಗುವುದಿಲ್ಲ’ ಎಂದರು ಎಂದು, ಪ್ರತಿಭಟನೆಯಲ್ಲಿ ಭಾಗವಹಿಸಿದ ದಾದಿ ಅನುಶಾ ಸಾವಂತ್‌ ಆರೋಪಿಸಿದ್ದಾರೆ.

ಆದರೆ, ಪರ್ಸೇಕರ್‌ ಇದನ್ನು ತಳ್ಳಿಹಾಕಿದ್ದಾರೆ. ತಾವು ಈ ರೀತಿ ಹೇಳಿಕೆ ನೀಡಿಲ್ಲ. ತಾವು ಹೇಳಿದ್ದನ್ನು ತಪ್ಪಾಗಿ ಗ್ರಹಿಸಿಕೊಂಡು ಬರೆಯಲಾಗಿದೆ ಎಂದು ಅವರು  ಹೇಳಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com