ಗುಜರಾತ್ ಉಗ್ರ ನಿಗ್ರಹ ವಿಧೇಯಕಕ್ಕೆ ಮತ್ತೆ ಅಂಗೀಕಾರ

ಸತತ 3 ಬಾರಿ ರಾಷ್ಟ್ರಪತಿಯಿಂದ ತಿರಸ್ಕೃತಗೊಂಡಿದ್ದ ವಿವಾದಿತ `ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಯಂತ್ರಣ ವಿಧೇಯಕ' ಗುಜರಾತ್ ಅಸೆಂಬ್ಲಿಯಲ್ಲಿ ಬಹುಮತದಿಂದ ಅಂಗೀಕಾರಗೊಂಡಿದೆ...
ಉಗ್ರ ನಿಗ್ರಹ ವಿಧೇಯಕಕ್ಕೆ ಅಂಗೀಕಾರ
ಉಗ್ರ ನಿಗ್ರಹ ವಿಧೇಯಕಕ್ಕೆ ಅಂಗೀಕಾರ

ಗಾಂಧಿನಗರ: ಸತತ 3 ಬಾರಿ ರಾಷ್ಟ್ರಪತಿಯಿಂದ ತಿರಸ್ಕೃತಗೊಂಡಿದ್ದ ವಿವಾದಿತ `ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಯಂತ್ರಣ ವಿಧೇಯಕ' ಗುಜರಾತ್ ಅಸೆಂಬ್ಲಿಯಲ್ಲಿ ಬಹುಮತದಿಂದ ಅಂಗೀಕಾರಗೊಂಡಿದೆ.

ಈ ವಿಧೇಯಕವು ಪೊಲೀಸರಿಗೆ ದೂರವಾಣಿ ಕದ್ದಾಲಿಸುವ ಮತ್ತು ಅದನ್ನು ರೆಕಾರ್ಡ್ ಮಾಡಿ ನ್ಯಾಯಾಲಯಕ್ಕೆ ನೀಡುವ ಅವಕಾಶ ಒದಗಿಸುತ್ತದೆ. ವಿಧೇಯಕದಲ್ಲಿ ವಿವಾದಾತ್ಮಕ ನಿಬಂಧನೆಗಳಿದ್ದ ಕಾರಣ ಒಮ್ಮೆ ಎಪಿಜೆ ಅಬ್ದುಲ್ ಕಲಾಂ, ಎರಡು ಬಾರಿ ಪ್ರತಿಭಾ ಪಾಟೀಲ್ ತಿರಸ್ಕರಿಸಿ, ಮರುಪರಿಶೀಲನೆಗೆ ಸೂಚಿಸಿದ್ದರು.

ಮಂಗಳವಾರ ವಿವಾದಾತ್ಮಕ ಅಂಶಗಳನ್ನು ತೆಗೆಯದೇ ವಿಧೇಯಕದ ಹೆಸರನ್ನಷ್ಟೇ ಬದಲಾಯಿಸಿ ಗುಜರಾತ್ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ. ಪ್ರತಿಪಕ್ಷ ಕಾಂಗ್ರೆಸ್‍ನ ವಿರೋಧದ ನಡುವೆಯೇ ಬಹುಮತದ ಅಂಗೀಕಾರ ದೊರೆತಿದೆ. ಇದಕ್ಕೆ ರಾಷ್ಟ್ರಪತಿ ಪ್ರಣಬ್ ಅವರ ಒಪ್ಪಿಗೆ ಸಿಗುತ್ತದೋ, ಇಲ್ಲವೋ ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com